ಸಾಧಾರಣ ಗೆಲುವಿನಲ್ಲಿ ಬಾಲಿವುಡ್ ಥಳುಕು

ರಮ್ಯ ಶೆಟ್ಟಿ
ಈ ವರ್ಷದಲ್ಲೂ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ಹರಿದು ಬಂದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷ ಬಾಲಿವುಡ್ ಸಾಮಾನ್ಯ ಯಶಸ್ಸು ಕಂಡಿದೆ. ಯಶಸ್ವೀ ಚಿತ್ರಗಳ ಪಟ್ಟಿ ಹೀಗಿದೆ.

ಜೋಧಾ ಅಕ್ಬರ್:

IFM
ಜೋಧಾ ಅಕ್ಬರ್ ಚಿತ್ರ ಪೆಬ್ರವರಿ 5, 2008ರಂದು ತೆರಕಕಂಡಿತು. ಈ ಚಿತ್ರವನ್ನು ಅಶಿತೋಷ್ ಗೋವರಿಕರ್ ನಿರ್ದೇಶಿಸಿದ್ದು ಇದು ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ರಜಪೂತ ರಾಜಕುಮಾರಿ ಜೋಧಾಭಾಯಿ ಅವರ ವಿವಾಹ ಮತ್ತು ಪ್ರೇಮ ಪ್ರಸಂಗವನ್ನು ಮುಖ್ಯ ಕಥಾವಸ್ತುವಾಗಿ ಹೊಂದಿತ್ತು. ಈ ಚಿತ್ರ ಐತಿಹಾಸಿಕ ಕಥೆಯನ್ನೊಳಗೊಂಡಿದ್ದು, ಇಲ್ಲಿ ಜೋಧಾ, ಅಕ್ಬರನ ಹೆಂಡತಿ ಅಲ್ಲ ಎಂಬುದಾಗಿ ರಜಪೂತ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ವಿವಾದದ ಕಿಡಿ ಹೊತ್ತಿಕೊಂಡಿತು. ಬಳಿಕ ಹಲವಾರು ಇತಿಹಾಸಕಾರರು ಜೋಧಾ, ಅಕ್ಬರನ ಹೆಂಡತಿ ಎಂಬ ಬಗ್ಗೆ ಸಾಕ್ಷ್ಯಧಾರಗಳ ಸಹಿತ ವಿವರಣೆ ನೀಡಿದ್ದರು. ಈ ವಿವಾದಿಂದಾಗಿ ಚಿತ್ರ ಉತ್ತರಪ್ರದೇಶ, ರಾಜಾಸ್ತಾನ, ಹರಿಯಾಣ ಮತ್ತು ಉತ್ತರಖಂಡಗಳಲ್ಲಿ ನಿಷೇಧಕ್ಕೆ ಒಳಾಗಿತ್ತು. ವಿವಾದದ ಕುರಿತು ಅಶುತೋಷ್ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಗೆಲುವು ಸಾಧಿಸಿದ್ದರು. ಬ್ರಿಟನ್ ಮತ್ತು ಅಮೆರಿಕಗಳಲ್ಲೂ ಪ್ರಶಂಸಿಲ್ಪಟ್ಟ ಈ ಚಿತ್ರ ದೇಶ, ವಿದೇಶಗಳಲ್ಲೂ ಯಶಸ್ವಿಯೆನಿಸಿತು. ಚಿತ್ರದಲ್ಲಿ ಹಾಟ್ ಜೋಡಿ ಎನಿಸಿಕೊಂಡ ಹೃತಿಕ್ ರೋಶನ್ ಮತ್ತು ಐಶ್ವರ್ಯ ರೈ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು.

ಪ್ರಶಸ್ತಿಗಳು:
32ನೇ ಸಾವೊ ಪೌಲೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ- 'ಆಡಿಯನ್ ಅವಾರ್ಡ್' .
ರಷ್ಯಾದಲ್ಲಿ ನಡೆದ ಮುಸ್ಲಿಂ ಸಿನಿಮಾಗಳ ಚಿತ್ರೋತ್ಸವದಲ್ಲಿ- 'ಬೆಸ್ಟ್ ಫಿಲ್ಮ್ ಗ್ರಾಂಡ್ ಫಿಕ್ಸ್'.
ಹೃತಿಕ್ ರೋಶನ್- ಅತ್ಯುತ್ತಮ ನಟ.

ರೇಸ್ (ಮಾರ್ಚ್ 21):
IFM

ರೇಸ್ ಚಿತ್ರದ ನಿರ್ದೇಶಕರು ಅಬ್ಬಾಸ್ ಮಸ್ತಾನ್. ಚಿತ್ರದಲ್ಲಿ ಅನಿಲ್ ಕಪೂರ್, ಅಕ್ಷಯ್ ಖನ್ನಾ, ಬಿಪಾಶ ಬಸು, ಕತ್ರಿನಾ ಕೈಫ್ ಮತ್ತು ಸಮೀರಾ ರೆಡ್ಡಿ ಮುಖ್ಯ ಪಾತ್ರ ವಹಿಸಿದ್ದರು. ರೇಸ್ ಚಿತ್ರಕ್ಕೆ ದ್ವಂಧ್ವ ವಿಮರ್ಶೆಗಳು ದೊರಕಿದ್ದರೂ, ವರ್ಷದ ಎರಡನೇ ಬಹುದೊಡ್ಡ ಹಿಟ್ ಎನಿಸಿಕೊಂಡಿತು. ಮೊದಲ ಸ್ಥಾನವನ್ನು ನಂತರ ಬಿಡುಗಡೆಯಾದ ಸಿಂಗ್ ಈಸ್ ಕಿಂಗ್ ಪಡೆದುಕೊಂಡಿದೆ.

ಜನ್ನತ್:
IFM
ಜನ್ನತ್ ಚಿತ್ರ ಮೇ 16ರಂದು ಬಿಡುಗಡೆಯಾಗಿದ್ದು, ಇಮ್ರಾನ್ ಹಶ್ಮಿ ಮತ್ತು ಸೋನಲ್ ಚೌಹಾಣ್ ಮುಖ್ಯಪಾತ್ರದಲ್ಲಿದ್ದಾರೆ. ಈ ಚಿತ್ರ ಹಣ ಮಾಡುವ ಹುಮ್ಮಸ್ಸಿನಲ್ಲಿ ಕ್ರಿಕೆಟ್ ಬುಕ್ಕಿಯಾಗುವ, ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಕೊಳ್ಳುವ ನಾಯಕನ ಕಥೆಯನ್ನು ಹೊಂದಿದೆ. ಸಣ್ಣ ಬಜೆಟ್‌ನ ಈ ಚಿತ್ರ ಬಾಕ್ಸ್ ಅಪೀಸಿನಲ್ಲಿ ಉತ್ತಮ ಕಲೆಕ್ಷನ್ ಗಳಿಸುವುದರೊಂದಿಗೆ ಹಿಟ್ ಎನಿಸಿಕೊಂಡಿತು.

ಸರ್ಕಾರ್ ರಾಜ್ (ಜೂನ್ 6):
IFM

ಸರಕಾರ್ ರಾಜ್ ಚಿತ್ರ 2005ರ ಹಿಟ್ ಚಿತ್ರ ಸರಕಾರ್‌ನ ಮುಂದುವರಿದ ಭಾಗ. ಈ ಚಿತ್ರ ಜೂನ್ 6ರಂದು ಬಿಡುಗಡೆಯಾಯಿತು. ಬಚ್ಚನ್ ಕುಟುಂಬದ ಮೂವರು ನಟರು(ಅಮಿತಾಬ್ ಬಚ್ಚನ್, ಅಭೀಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್) ಮುಖ್ಯಪಾತ್ರದಲ್ಲಿದ್ದ ಈ ಚಿತ್ರ ರಾಜಕೀಯ ಏಳು-ಬೀಳುಗಳ ಮೇಲೆ ಕೇಂದ್ರೀಕೃತವಾಗಿರುವ ಕಥಾಹಂದರವನ್ನು ಹೊಂದಿದೆ. ಸರಕಾರ್ ರಾಜ್‌ನಲ್ಲಿ ಬಾಲಿವುಡ್ ಡೆಬ್ಯೂಟ್ ಮಾಡಿದ ರಾಜೇಶ್ ಶ್ರಿಂಗಾರ್‌ಪೋರ್ ಅವರ ಪಾತ್ರ ಶಿವಸೇನಾ ನಾಯಕ ರಾಜ್ ಠಾಕ್ರೆ ಅವರ ಮೇಲೆ ಅಧರಿತ ಎಂದು ವರದಿಯಾಗಿತ್ತು. ಈ ಚಿತ್ರ 2008ರ ಮೊದಲರ್ಧ ವರ್ಷದಲ್ಲಿ ಹಿಟ್ ಎನಿಸಿಕೊಂಡು ಕೇವಲ ನಾಲ್ಕು ಚಿತ್ರಗಳಲ್ಲಿ ಒಂದೆನಿಸಿದೆ. (ಜೋಧಾ ಅಕ್ಬರ್, ರೇಸ್, ಜನ್ನತ್, ಸರಕಾರ್ ರಾಜ್).ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ

2004ರಲ್ಲಿ ಆರಂಭವಾಯಿತು ಈ ನುಡಿಸಿರಿ ಎಂಬ ನುಡಿ ಜಾತ್ರೆಯ ಸರಣಿ. ಈ ಬಾರಿ ನವೆಂಬರ್ 28, 29 ಹಾಗೂ 30ರಂದು ...

ಆಳ್ವಾಸ್ ನುಡಿಸಿರಿಗೆ ಕಣವಿ ಸಾರಥ್ಯ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು-ನುಡಿಯ ...

ಆಳ್ವಾಸ್ ನುಡಿಸಿರಿ-08: ನಿಮ್ಮ ವೆಬ್‌ದುನಿಯಾದಲ್ಲಿ

ಕನ್ನಡ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ಜನಪದೀಯ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಸಹೃದಯರಿಂದ ಯಾವ ...