ಹುಬ್ಬೇರಿಸಿದ ಒಬಾಮ, ಪ್ರಚಂಡ ಆಯ್ಕೆ- ಬಿಕ್ಕಟ್ಟಿನ ತಾಕಲಾಟ....

ನಾಗೇಂದ್ರ ತ್ರಾಸಿ
ಪ್ರಸಕ್ತ 2008ರ ಸಾಲಿನಲ್ಲಿ ಅಂತಾರಾಷ್ಟ್ರೀಯವಾಗಿ ಗಮನಸೆಳೆದ ಪ್ರಮುಖ ಅಂಶಗಳೆಂದರೆ ಮಿಲಿಟರಿ ಆಡಳಿತ, ಮುಶರ್ರಫ್ ಅಧಿಕಾರದಿಂದ ನಲುಗಿ ಹೋಗಿದ್ದ, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮೂಲಕ ದಿವಂಗತ ಬೇನಜೀರ್ ಭುಟ್ಟೋ ಅವರ ಪಿಪಿಪಿ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್‌‌(ಎನ್) ಬಹುಪಾಲು ಜಯಸಾಧಿಸುವ ಮೂಲಕ ಮತದಾರನಿಂದ ಅತಂತ್ರ ತೀರ್ಪು.

ND

ಕೊನೆಗೂ ಹಲವಾರು ಬಿಕ್ಕಟ್ಟುಗಳ ನಂತರ ಪಿಪಿಪಿ-ಪಿಎಂಎಲ್‌ಎನ್ ಕೈ ಜೋಡಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದು. ತದನಂತರ ಅಸಿಫ್ ಅಲಿ ಜರ್ದಾರಿ ಅಧ್ಯಕ್ಷರಾಗಿಯೂ, ಯೂಸೂಫ್ ರಾಜಾ ಗಿಲಾನಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು. ಆದರೂ ಮುಷರ್ರಫ್ ಆಡಳಿತಾವಧಿಯಲ್ಲಿ ವಜಾಗೊಂಡ ಪಾಕ್ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮರು ನೇಮಕಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಮೈತ್ರಿ ಪಕ್ಷಗಳ ನಡುವೆ ಅಸಮಾಧಾನ ಭುಗಿಲೇಳುವ ಮೂಲಕ ಪಿಎಂಎಲ್‌ಎನ್‌ನ ಸಂಸದರು ಬೆಂಬಲ ಹಿಂತೆಗೆದುಕೊಂಡ ಘಟನೆ ನಡೆಯಿತು.

ಮತ್ತೊಂದು ಪ್ರಮುಖ ಘಟನೆ ಯಾವುದೆಂದರೆ ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿಗೆ ಭಾಜನವಾಗಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಕಪ್ಪು ಜನಾಂಗದ ವ್ಯಕ್ತಿಯೊಬ್ಬ ಶ್ವೇತಭವನವನ್ನು ಪ್ರವೇಶಿಸುವಂತಾಗಿದ್ದು, ಅಮೆರಿಕದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಪ್ರಮುಖ ಅಂಶವಾಯಿತು. ರಿಪಬ್ಲಿಕ್ ಪಕ್ಷದ ಮೆಕೈನ್ ಅವರನ್ನು ಸೋಲಿಸುವ ಮೂಲಕ ಡೆಮೋಕ್ರಟ್ ಪಕ್ಷದ ಬರಾಕ್ ಹುಸೇನ್ ಒಬಾಮ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ವಿಶ್ವದಾದ್ಯಂತ ಅಭಿನಂದನೆಗೆ ಭಾಜನರಾದರು.
PTI

ಮೂರನೇ ಘಟನೆ ಎರಡು ಶತಮಾನಕ್ಕಿಂತಲೂ ಹೆಚ್ಚು ಅರಸೊತ್ತಿಗೆ ಆಡಳಿತಕ್ಕೆ ಒಳಗಾಗಿದ್ದ ನೇಪಾಳದಲ್ಲಿ, ಪ್ರಜಾಸತ್ತಾತ್ಮಕವಾಗಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆಯುವ ಮೂಲಕ ನೇಪಾಳ ಮಾವೋವಾದಿ ಪಕ್ಷದ ಜಯಭೇರಿ. ಆ ನಿಟ್ಟಿನಲ್ಲಿ ದಶಕಗಳಿಂದ ರಾಜಾಡಳಿತದ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಾ ಬಂದಿದ್ದ ಮಾವೋವಾದಿಗಳಿಗೆ ಜಯ ದೊರೆಯುವಂತಾಯಿತು. ಬಳಿಕ ಮಾವೋವಾದಿ ನಾಯಕ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೂ ಮಾವೋವಾದಿಗಳಿಗೆ ಸಂಪೂರ್ಣ ಬಹುಮತ ದೊರೆಯದಿದ್ದ ಪರಿಣಾಮ ನೇಪಾಳಿ ಕಾಂಗ್ರೆಸ್ ಸಾಕಷ್ಟು ಹಾವು-ಏಣಿ ಆಟ ಆಡಿಸುವ ಮೂಲಕ ಕೊನೆಗೂ ಸರಕಾರ ರಚಿಸಿತ್ತು. ಮಾಜಿ ಪ್ರಧಾನಿ ಸೂರ್ಯ ಬಹದ್ದೂರ್ ಥಾಪಾ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಯಿತು.
PTI


ಅಮೆರಿಕಕ್ಕೆ ಸಿಂಹ ಸ್ವಪ್ನವಾಗಿದ್ದ ಪುಟ್ಟ ರಾಷ್ಟ್ರ ಕ್ಯೂಬಾವನ್ನು 50ವರ್ಷಗಳ ಕಾಲ ಆಳಿದ್ದ ಸರ್ವಾಧಿಕಾರಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರು ತಮ್ಮ ಪದವಿಗೆ ರಾಜೀನಾಮೆ ನೀಡುವ ಮೂಲಕ, ಸಹೋದರ ರೌಲ್ ಕ್ಯಾಸ್ಟ್ರೋಗೆ ಅಧಿಕಾರ ಹಸ್ತಾಂತರಿಸಿದ್ದರು. ಅದೇ ತೆರನಾಗಿ ರಷ್ಯಾದ ಅಧ್ಯಕ್ಷರಾಗಿ ಡಿಮಿಟ್ರಿ ಮೆಡ್ವೆಡೇವ್ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇವೆಲ್ಲ ಘಟನೆಗಳ ನಡುವೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಚಂಡಮಾರುತಕ್ಕೆ ಲಕ್ಷಾಂತರ ಜನರು ಬಲಿಯಾಗಬೇಕಾಯಿತು.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ

2004ರಲ್ಲಿ ಆರಂಭವಾಯಿತು ಈ ನುಡಿಸಿರಿ ಎಂಬ ನುಡಿ ಜಾತ್ರೆಯ ಸರಣಿ. ಈ ಬಾರಿ ನವೆಂಬರ್ 28, 29 ಹಾಗೂ 30ರಂದು ...

ಆಳ್ವಾಸ್ ನುಡಿಸಿರಿಗೆ ಕಣವಿ ಸಾರಥ್ಯ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು-ನುಡಿಯ ...

ಆಳ್ವಾಸ್ ನುಡಿಸಿರಿ-08: ನಿಮ್ಮ ವೆಬ್‌ದುನಿಯಾದಲ್ಲಿ

ಕನ್ನಡ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ಜನಪದೀಯ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಸಹೃದಯರಿಂದ ಯಾವ ...