ಹೇಸಿಗೆ ರಾಜಕೀಯದ ಆಡುಂಬೊಲದಲ್ಲಿ ಅರಳಿದ ಶಾಸ್ತ್ರೀಯತೆ

ನಾಗೇಂದ್ರ ತ್ರಾಸಿ
2008 ಭಯೋತ್ಪಾದಕರ ಅಟ್ಟಹಾಸ, ನಕ್ಸಲೀಯರ ರಕ್ತದಾಹ, ರಾಜ್ಯರಾಜಕಾರಣ ಹಿಂದೆಂದೂ ಕಾಣದಂತಹ ಹೇವರಿಕೆ ಹುಟ್ಟಿಸುವ ರಾಜಕಾರಣ ಸೇರಿದಂತೆ ಹಲವಾರು ಬೀಭತ್ಸ ಘಟನೆಗಳಿಗೆ ಸಾಕ್ಷಿಯಾಗುವ ಮೂಲಕ ನಮ್ಮನ್ನು ಹೊಸವರ್ಷದತ್ತ ಕೊಂಡೊಯ್ದಿದೆ. ಜನತಾಪರಿವಾರ ಸರಕಾರದ ನಂತರ ರಾಜ್ಯರಾಜಕಾರಣದಲ್ಲಿ ಅದರಲ್ಲೂ ದಕ್ಷಿಣಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆ ಏರಿರುವುದು ರಾಜ್ಯದ ಪ್ರಮುಖ ಬೆಳವಣಿಗೆಯಲ್ಲಿ ಒಂದಾಗಿದೆ. ಅದರಂತೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಗರಿ ಹೀಗೆ ಹಲವು ಸಿಹಿ-ಕಹಿ ಘಟನಾವಳಿಗಳ ಹಿನ್ನೋಟ ಇಲ್ಲಿದೆ.....

PTI

ಉಗ್ರರು ಬಾಯ್ಬಿಟ್ಟ ಸ್ಫೋಟ ನಂಟು:
ದಾವಣಗೆರೆ ಸಮೀಪದ ಹೊನ್ನಾಳಿಯಲ್ಲಿ ಬೈಕ್ ಕಳ್ಳತನದ ಮೇಲೆ ಪೊಲೀಸರಿಗೆ ಸೆರೆಸಿಕ್ಕ ಮಹಮ್ಮದ್ ಗೌಸ್ ಅಲಿಯಾಸ್ ರಿಯಾಸುದ್ದೀನ್ ನಾಸೀರ್ ಮತ್ತು ಅಸಾದುಲ್ಲಾ ಇಸ್ಮಾಯಿಲ್ ಅಬೂಬಕರ್ ತನಿಖೆ ವೇಳೆ ಬಹಿರಂಗ ಪಡಿಸಿದ ನಗ್ನ ಸತ್ಯಗಳು ಕರ್ನಾಟಕವನ್ನು ಬೆಚ್ಚಿ ಬೀಳಿಸಿತ್ತು.ಧಾರವಾಡದ ಕಲಘಟಗಿ ಬಳಿ ಅರಣ್ಯದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಮಾಡಿರುವ ಬಗ್ಗೆಯೂ ವಿವರ ನೀಡಿದ್ದರು. ಕರ್ನಾಟಕದಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಗಟ್ಟಿಗೊಳಿಸಲು ದಾರ್ ಇ ರಿಬಾತ್ ಎಂಬ ಸಂಘಟನೆ ಮೂಲಕ ತರಬೇತಿ ಪಡೆದಿರುವುದಾಗಿ ಗೌಸ್ ತಿಳಿಸಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಕಿಮ್ಸ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಆಸೀಫ್‌‌ನನ್ನು ಬಂಧಿಸುವ ಮೂಲಕ ಮತ್ತಷ್ಟು ಸ್ಫೋಟಕ ವಿವರಗಳು ಬಯಲಾಗಿದ್ದವು.ಹುಬ್ಬಳ್ಳಿ ಸಿಮಿ ಸಂಘಟನೆಯ ನಾಯಕನಾಗಿರುವ ಆಸೀಫ್ ಮತ್ತು ಗೋವಾದ ಒಟ್ಟು 11 ಪ್ರಮುಖ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸುವ ಸಂಚು ಕೂಡ ಬಯಲಾಗಿತ್ತು.

ಅಧಿಕಾರದ ಗದ್ದುಗೆ ಏರಿದ ಬಿಜೆಪಿ:
ಕರ್ನಾಟಕ ರಾಜ್ಯರಾಜಕಾರಣದಲ್ಲಿ ಅತಿ ಹೆಚ್ಚು ಆಳ್ವಿಕೆ ನಡೆಸಿದ್ದು ಕಾಂಗ್ರೆಸ್ ಬಳಿಕ ಜನತಾ ಪರಿವಾರ ಸಡ್ಡು ಹೊಡೆಯುವ ಮೂಲಕ 1983ರಲ್ಲಿ ಕಾಂಗ್ರೆಸ್ಸೇತರ ಸರಕಾರ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಭಾರತೀಯ ಜನತಾ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಕನಸು ಕೊನೆಗೂ ನನಸಾಗಿದ್ದು, 2008ರಲ್ಲಿ. ಅದು ಭಾಜಪದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾದ ಪ್ರಮುಖ ಘಟನೆಯಾಗಿತ್ತು. ಯಾಕೆಂದರೆ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರಕ್ಕೆ ಏರಿದ ಕೀರ್ತಿಗೆ ಭಾಜನಾಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ , ಬಳಿಕ ಜೆಡಿಎಸ್-ಬಿಜೆಪಿ ಮೈತ್ರಿ, ರಾಷ್ಟ್ರಪತಿ ಆಳ್ವಿಕೆ, ವಚನಭ್ರಷ್ಟತೆಯೊಂದಿಗೆ ಕೆಳಮಟ್ಟದ ರಾಜಕೀಯದಿಂದ ಮತದಾರರಲ್ಲಿ ಅಸಮಾಧಾನ ಹುಟ್ಟು ಹಾಕುವ ಮೂಲಕ, ಕೊನೆಗೂ ಬಿಜೆಪಿ ಚುನಾವಣೆಯಲ್ಲಿ ಜಯಬೇರಿ ಬಾರಿಸಿ, ಆಡಳಿತ ಚುಕ್ಕಾಣಿ ಹಿಡಿದಿತ್ತು. ಈ ಯಶಕ್ಕೆ ಕಾರಣರಾದವರು ಬೂಕನಕೆರೆ ಎಸ್. ಯಡಿಯೂರಪ್ಪ. ಬಿಜೆಪಿ ಅಧಿಕಾರದೊಂದಿಗೆ ಮುಖ್ಯಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸುವ ಮೂಲಕ ಭಾಜಪ ತನ್ನ ಛಾಪು ಮೂಡಿಸಿತ್ತು.
PTI

ರಸಗೊಬ್ಬರ ಮತ್ತು ಗೋಲಿಬಾರ್:
ರೈತ ಹೆಸರಲ್ಲಿ ಹಸಿರು ಶಾಲು ಹೊದ್ದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತಾರೂಢ ಸರಕಾರ ಕೊನೆಗೂ ರಾಜ್ಯದಲ್ಲಿ ರಸಗೊಬ್ಬರದ ಅಭಾವ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗುವ ಮೂಲಕ ರೈತರ ಆಕ್ರೋಶಕ್ಕೆ ಸಿಲುಕಿತ್ತು. ಧಾರವಾಡ-ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ರೈತರ ಆಕ್ರೋಶ ಹಿಂಸಾಚಾರಕ್ಕೆ ತಿರುಗಿತ್ತು. ಕೊನೆಗೂ ಹಾವೇರಿಯಲ್ಲಿ ಉದ್ರಿಕ್ತ ರೈತರ ಗುಂಪಿನ ಮೇಲೆ ಪೊಲೀಸರು ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ರೈತನೋರ್ವ ಬಲಿಯಾಗಬೇಕಾಯಿತು. ಈ ಘಟನೆ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರಿಗೆ ಕಳಂಕ ತಂದಿತ್ತು. ಅಲ್ಲದೇ ಪ್ರತಿಪಕ್ಷಗಳ, ರೈತರ ತೀವ್ರ ಟೀಕೆಗೆ ಒಳಗಾಗಬೇಕಾಗಿದ್ದು ವಿಪರ್ಯಾಸ.

ಆಪರೇಶನ್ ಕಮಲ:
ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಪಟ್ಟ ಅಲಂಕರಿಸಿದ್ದ ಬಿಜೆಪಿ ತನ್ನ ಸರಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅನುಸರಿಸಿದ 'ಆಪರೇಶನ್ ಕಮಲ'ದ ತಂತ್ರಗಾರಿಕೆ ಎಲ್ಲ ನೀತಿ, ನಿಯಮ, ತತ್ವಬದ್ದ ರಾಜಕಾರಣಕ್ಕೆ ತಿಲಾಂಜಲಿ (ಈ ಮೊದಲು ಕಾಂಗ್ರೆಸ್ , ಜನತಾಪರಿವಾರದಿಂದ ಆಗಿತ್ತಾದರೂ ಈ ಪ್ರಮಾಣದಲ್ಲಿ ಆಗಿರಲಿಲ್ಲ) ನೀಡುವ ಮೂಲಕ ಕೊಳಕು ರಾಜಕೀಯಕ್ಕೆ ಇಳಿದ ಅಪವಾದಕ್ಕೆ ಗುರಿಯಾಗಬೇಕಾಯಿತು. ಕ್ಷಿಪ್ರ ರಾಜಕೀಯ ಬೆಳವಣಿಗೆ ಎಂಬಂತೆ ಜೆಡಿಎಸ್‌ನ ಇಬ್ಬರು ಕಾಂಗ್ರೆಸ್‌ನ ಇಬ್ಬರು ಶಾಸಕರು ಜನಾದೇಶವನ್ನು ದಿಕ್ಕರಿಸಿ, ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಮತ್ತೆ ಕಾಂಗ್ರೆಸ್‌ನ ಓರ್ವ ಹಾಗೂ ಜೆಡಿಎಸ್‌ನ ಇಬ್ಬರು ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
PTI

ಜೆಡಿಎಸ್‌ನ ಮಧುಗಿರಿ ಕ್ಷೇತ್ರದ ಗೌರಿಶಂಕರ್, ಹುಕ್ಕೇರಿಯ ಉಮೇಶ್ ಕತ್ತಿ, ದೇವದುರ್ಗದ ಶಿವನಗೌಡ, ಅರಬಾವಿಯ ಬಾಲಚಂದ್ರ ಜಾರಕಿಹೊಳಿ, ಕಾಂಗ್ರೆಸ್‌ನ ಕಾರವಾರದ ಆನಂದ ಅಸ್ನೋಟಿಕರ್, ಜಗ್ಗೇಶ್-ತುರುವೇಕೆರೆ, ದೊಡ್ಡಬಳ್ಳಾಪುರ ನರಸಿಂಹ ಸ್ವಾಮಿ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ, ರಾಜ್ಯದ ಏಳು ಕ್ಷೇತ್ರಗಳಲ್ಲಿ ಮತ್ತೆ ಉಪಚುನಾವಣೆ ನಡೆಸುವ ಹೊರೆಯನ್ನು ಹೊರಿಸಿದ್ದಾರೆ. ಆ ನಿಟ್ಟಿನಲ್ಲಿ ಜನಾದೇಶ ದಿಕ್ಕರಿಸಿ, ಅಧಿಕಾರದ ಆಸೆಗಾಗಿ ಬಿಜೆಪಿ ಸೇರ್ಪಡೆಗೊಂಡ ಶಾಸಕರಿಗೆ ಉಪಚುನಾವಣೆಯಲ್ಲಿ ಯಾವ ಪಕ್ಷದ ಪರ ತೀರ್ಪು ನೀಡುತ್ತಾನೆ ಎಂಬುದು ರಾಜಕಾರಣಗಳಿಗೆ ತಕ್ಕ ಪಾಠವಾಗಲಿದೆ.

ಹೊಗೇನಕಲ್ ವಿವಾದ:
ತಮಿಳುನಾಡಿನ ಫ್ಲೈ ಓವರ್ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರು, ಹೊಗೇನಕಲ್ ನೀರಾವರಿ ಯೋಜನೆ ಬಗ್ಗೆ ಮಾತನಾಡುತ್ತ, ಜೀವ ತೆತ್ತಾದರೂ ಹೊಗೇನಕಲ್ ಯೋಜನೆ ಮಾಡಿಯೇ ಸಿದ್ದ ಎಂಬ ಹೇಳಿಕೆ, ಕರ್ನಾಟಕದಾದ್ಯಂತ ಆಕ್ರೋಶ ಭುಗಿಲೇಳಲು ಕಾರಣವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವಾರು ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದಲ್ಲದೇ, ತಮಿಳುನಾಡು-ಕರ್ನಾಟಕ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಅದರ ಪರಿಣಾಮ ಎಂಬಂತೆ ತಮಿಳುನಾಡಿನಲ್ಲೂ ಕೆಲವು ಕನ್ನಡಿಗರ ಸಂಸ್ಥೆ, ಹೋಟೆಲುಗಳ ಮೇಲೂ ದಾಳಿ ನಡೆದಿತ್ತು. ತಮಿಳು ಚಲನಚಿತ್ರ ಪ್ರದರ್ಶನಕ್ಕೆ ಅಡ್ಡಿ. ಬಳಿಕ ಬೆಂಗಳೂರಿನ ತಮಿಳಿಗರಿಗೆ ಒತ್ತಡ, ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಮಧ್ಯಸ್ಥಿಕೆಯಿಂದಾಗಿ, ಕರುಣಾನಿಧಿಯವರು ಕರ್ನಾಟಕದಲ್ಲಿ ನೂತನ ಸರಕಾರ ಬರುವವರೆಗೆ ಹೊಗೇನಕಲ್ ಯೋಜನೆ ಮುಂದುವರಿಸುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ವಿವಾದ ತಣ್ಣಗಾಗಿತ್ತು.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ

2004ರಲ್ಲಿ ಆರಂಭವಾಯಿತು ಈ ನುಡಿಸಿರಿ ಎಂಬ ನುಡಿ ಜಾತ್ರೆಯ ಸರಣಿ. ಈ ಬಾರಿ ನವೆಂಬರ್ 28, 29 ಹಾಗೂ 30ರಂದು ...

ಆಳ್ವಾಸ್ ನುಡಿಸಿರಿಗೆ ಕಣವಿ ಸಾರಥ್ಯ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು-ನುಡಿಯ ...

ಆಳ್ವಾಸ್ ನುಡಿಸಿರಿ-08: ನಿಮ್ಮ ವೆಬ್‌ದುನಿಯಾದಲ್ಲಿ

ಕನ್ನಡ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ಜನಪದೀಯ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಸಹೃದಯರಿಂದ ಯಾವ ...