ನಮ್ಮ ಋಷಿಮುನಿಗಳ ಪ್ರಕಾರ ಆರು ವೇದಗಳಲ್ಲಿ ಜ್ಯೋತಿಷ್ಯವು ಒಂದು. ಜ್ಯೋತಿಷ್ಯವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದಗಳ ಕಾಲದಿಂದಲೂ ಶುಭ ಕಾರ್ಯಗಳಿಗೆ ಮೂಹೂರ್ತಾದಿ ಕಾಲವನ್ನು ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ ಎಲ್ಲವನ್ನು ಸೂರ್ಯನ ಚಲನದಿಂದ ನಿರ್ಧರಿಸುತ್ತಿದ್ದರು. ಸೂರ್ಯನು ಒಂದು ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಕಾಲ ಎನ್ನುವರು. (ಅವುಗಳು ಮೇಷ ಸಂಕ್ರಾಂತಿ-ವಿಷುವತ್ ಪುಣ್ಯಕಾಲ, ವೃಷಭ ಸಂಕ್ರಾಂತಿ- ವಿಷ್ಣುಪಾದ ಪುಣ್ಯಕಾಲ, ಮಿಥುನ ಸಂಕ್ರಾಂತಿ