ಜಿಎಸ್ಟಿ ಮಸೂದೆ ಅಂಗೀಕಾರವಾಗುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು, ಚಿಲ್ಲರೆ ವಹಿವಾಟುದಾರರು ಶೇರುಗಳ ಖರೀದಿಗೆ ಮುಂದಾಗಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 220 ಪಾಯಿಂಟ್ಗಳ ಏರಿಕೆ ಕಂಡಿದೆ. ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 156.76 ಪಾಯಿಂಟ್ಗಳ ಕುಸಿತ ಕಂಡಿದ್ದ ಬಿಎಸ್ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 220.09 ಪಾಯಿಂಟ್ಗಳ ಏರಿಕೆ ಕಂಡು 28,271.95 ಅಂಕಗಳಿಗೆ ತಲುಪಿದೆ. ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ