ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 41 ಪಾಯಿಂಟ್ಗಳ ಚೇತರಿಕೆಯೊಂದಿಗೆ ಮುಕ್ತಾಯವಾಗಿದೆ. ಕೇಂದ್ರ ಸರಕಾರ 22,915 ಕೋಟಿ ರೂಪಾಯಿಗಳನ್ನು 13 ಸರಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ವಿತರಿಸುವ ನಿರ್ಧಾರದಿಂದ ಹೂಡಿಕೆದಾರರು ಶೇರುಗಳ ಖರೀದಿಗೆ ಮುಂದಾಗಿದ್ದಾರೆ ಎಂದು ಮಾರುಕಟ್ಟೆಯ ಡೀಲರ್ಗಳು ತಿಳಿಸಿದ್ದಾರೆ. ಜಿಎಸ್ಟಿ ಮಸೂದೆ ಅಂಗೀಕಾರವಾಗುವ ನಿರೀಕ್ಷೆ ಮತ್ತು ದೇಶಾದ್ಯಂತ ಉತ್ತಮ ಮುಂಗಾರು ಮಳೆಯ ಹಿನ್ನೆಲೆ ಶೇರುಪೇಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ಸಾರ್ವಜನಿಕ ಸ್ವಾಮ್ಯದ