ಸೆನ್ಸೆಕ್ಸ್: ಸತತ ಮೂರನೇ ದಿನವೂ ಕುಸಿತ ಕಂಡ ಶೇರುಪೇಟೆ ಸೂಚ್ಯಂಕ

ಮುಂಬೈ, ಸೋಮವಾರ, 29 ಆಗಸ್ಟ್ 2016 (13:49 IST)

ಶೇರುಪೇಟೆ ಸತತ ಮೂರನೇ ದಿನವೂ ಕುಸಿತ ಕಂಡಿದೆ. ಹೂಡಿಕೆದಾರರು ಶೇರುಗಳ ಮಾರಾಟಕ್ಕೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 60 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 274.69 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 60.39 ಪಾಯಿಂಟ್‌ಗಳ ಕುಸಿತ ಕಂಡು 27,721.86 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 11.10 ಪಾಯಿಂಟ್‌ಗಳ ಕುಸಿತ ಕಂಡು 8,561.45 ಅಂಕಗಳಿಗೆ ತಲುಪಿದೆ.
 
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.2.24 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.33 ರಷ್ಟು ಕುಸಿತ ಕಂಡಿದೆ. ಶಾಂಘೈ ಶೇರುಪೇಟೆ ಸೂಚ್ಯಂಕ ಶೇ.0.04 ರಷ್ಟು ಏರಿಕೆಯಾಗಿದೆ.
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ಸೂಚ್ಯಂಕ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.29 ರಷ್ಟು ಇಳಿಕೆಯೊಂದಿಗೆ ಮುಕ್ತಾಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮೊಬೈಲ್ ಗ್ರಾಹಕರಿಗೆ ಬಂಪರ್ ಆಫರ್: ಕೇವಲ 250 ರೂ.ಗಳಿಗೆ 10 ಜಿಬಿ, 4ಜಿ ಡೇಟಾ ಸೇವೆ

ಭಾರತೀಯ ಟೆಲಿಕಾಂ ಸಂಸ್ಥೆಗಳಲ್ಲಿ 4ಜಿ ಸೇವೆಯಲ್ಲಿ ಗರಿಷ್ಠ ಚಂದಾದಾರರನ್ನು ಸಂಗ್ರಹಿಸಲು ಬಾರಿ ಪೈಪೋಟಿ ...

news

ಟಾಪ್‌-10 ಪಟ್ಟಿಯಲ್ಲಿ ಮಾರುತಿ ಸುಜುಕಿ ಉತ್ಪನ್ನಗಳಿಗೆ ಅಗ್ರಸ್ಥಾನ

ಇತ್ತೀಚೆಗೆ ಬಿಡುಗಡೆಯಾದ ಸುವಿ ವಿಟಾರಾ ಬ್ರೆಝ್ಝಾ ಸೇರಿದಂತೆ ಏಳು ಆವೃತ್ತಿಯ ವಾಹನಗಳು ಜುಲೈ ತಿಂಗಳಿನ ...

news

ಫ್ರೀಡಂ-251 ಆಯ್ತು, ಮತ್ತೀಗ ಚಾಂಪ್‌ಒನ್-501!

ಪ್ರಸಕ್ತ ಸಾಲಿನಲ್ಲಿ ಕೇವಲ 251 ರೂಪಾಯಿಗಳಲ್ಲಿ ಸ್ಮಾರ್ಟ್‌ಪೋನ್ ನೀಡುವುದಾಗಿ ಭರವಸೆ ನೀಡುವ ಮೂಲಕ ...

news

120 ಡಿಗ್ರಿ ವೈಡ್ ಆಂಗಲ್ ಲೆನ್ಸ್ ವೈಶಿಷ್ಟ್ಯದ ಎಲ್‌ಜಿ ಎಕ್ಸ್-ಕ್ಯಾಮ್ ಸ್ಮಾರ್ಟ್‌ಪೋನ್ ಬಿಡುಗಡೆ

ದಕ್ಷಿಣ ಕೊರಿಯಾ ಮೂಲದ ಎಲೆಕ್ಟ್ರಾನಿಕ್ಸ್ ಸಂಘಟಿತ ಎಲ್‌ಜಿ ಸಂಸ್ಥೆ, ಭಾರತದ ಮಾರುಕಟ್ಟೆಗೆ ಡ್ಯುಯಲ್ ರಿಯರ್ ...