ಜಾಗತಿಕ ಮಾರುಕಟ್ಟೆಗಳ ಮಿಶ್ರವಹಿವಾಟಿನ ಮಧ್ಯೆಯೂ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 130 ಪಾಯಿಂಟ್ಗಳ ಏರಿಕೆ ಕಂಡಿದೆ. ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 30.49 ಪಾಯಿಂಟ್ಗಳ ಏರಿಕೆ ಕಂಡಿದ್ದ ಬಿಎಸ್ಇ ಸೂಚ್ಯಂಕ, ಪಿಎಸ್ಯು, ಬ್ಯಾಂಕಿಂಗ್, ವಿದ್ಯುತ್, ಐಟಿ, ರಿಯಲ್ಟಿ ಮತ್ತು ತೈಲ ಅನಿಲ ಶೇರುಗಳ ವಹಿವಾಟಿನಲ್ಲಿ ಚೇತರಿಕೆಯಾಗಿದ್ದರಿಂದ ಇಂದಿನ ಆರಂಭಿಕ ವಹಿವಾಟಿನಲ್ಲಿ 129.61 ಪಾಯಿಂಟ್ಗಳ ಏರಿಕೆ ಕಂಡು 27,803 21 ಅಂಕಗಳಿಗೆ ತಲುಪಿದೆ. ಅದರಂತೆ, ರಾಷ್ಟ್ರೀಯ ಮಾರುಕಟ್ಟೆ