ಐಟಿಸಿ ಕಂಪೆನಿ ತ್ರೈಮಾಸಿಕ ಅವಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ಗಳಿಸಿದ ಹಿನ್ನೆಲೆಯಲ್ಲಿ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 54 ಪಾಯಿಂಟ್ಗಳ ಏರಿಕೆ ಕಂಡಿದೆ. ಎಫ್ಎಂಸಿಜಿ, ವಿದ್ಯುತ್, ಬಂಡವಾಳ ವಸ್ತುಗಳು, ವಾಹನೋದ್ಯಮ, ಗೃಹೋಪಕರಣ ವಸ್ತುಗಳು ಮತ್ತು ಹೆಲ್ತ್ಕೇರ್ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಶೇ.0.75 ರಷ್ಟು ಚೇತರಿಕೆ ಕಂಡಿದೆ. ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 205.37 ಪಾಯಿಂಟ್ಗಳ ಕುಸಿತ ಕಂಡಿದ್ದ ಬಿಎಸ್ಇ