ರಾಜ್ಯಸಭೆಯಲ್ಲಿ ಜಿಎಸ್ಟಿ ಮಸೂದೆ ಅಂಗೀಕಾರವಾಗಿದ್ದರೂ ಜಾರಿಯಾಗುವ ಅನಿಶ್ಚಿತತೆಯಿಂದ ಹೂಡಿಕೆದಾರರು ಶೇರುಗಳ ಖರೀದಿಗೆ ಮುಂದಾಗಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 60 ಪಾಯಿಂಟ್ಗಳ ಕುಸಿತ ಕಂಡಿದೆ. ಗೃಹೋಪಕರಣ ವಸ್ತುಗಳು, ತೈಲ ಮತ್ತು ಅನಿಲ, ಬ್ಯಾಂಕಿಂಗ್, ಎಫ್ಎಂಸಿಜಿ, ತಂತ್ರಜ್ಞಾನ ಮತ್ತು ಐಟಿ ಕ್ಷೇತ್ರಗಳ ಶೇರುಗಳು ಮಾರಾಟಕ್ಕೆ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ ಎಂದು ಮಾರುಕಟ್ಟೆಯ ಡೀಲರ್ಗಳು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ 511.09 ಪಾಯಿಂಟ್ಗಳ ಕುಸಿತ ಕಂಡಿದ್ದ ಬಿಎಸ್ಇ