ಬ್ಯಾಂಕ್ ಆಫ್ ಇಂಗ್ಲೆಂಡ್ ರೆಪೋ ದರ ಕಡಿತ ಮತ್ತು ಆರ್ಥಿಕ ನೀತಿ ಸರಳಿಕರಣ ಘೋಷಿಸುತ್ತಿದ್ದಂತೆ ದೇಶಿಯ ಶೇರುಪೇಟೆ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 364 ಪಾಯಿಂಟ್ಗಳ ಭರ್ಜರಿ ಚೇತರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟು ಮತ್ತು ತೈಲ ಹಾಗೂ ಅನಿಲ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಭಾರಿ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್ಗಳು ತಿಳಿಸಿದ್ದಾರೆ. ಹಿಂದಿನ ದಿನದ ತೊಳಲಾಟದ