ಬುಂದೇಲಖಂಡದಲ್ಲಿ ಕುರಿಯೊಂದು ಮೂರು ಕಣ್ಣಿನ ಮರಿಗೆ ಜನ್ಮ ನೀಡಿದ್ದು, ಶಿವರಾತ್ರಿಯಂದು ಹುಟ್ಟಿರುವ ಈ ಮರಿ ಶಿವನ ವರದಾನ ಎಂದು ಸುತ್ತಮುತ್ತಲಿನ ಹಳ್ಳಿಯ ಜನರು ಅದಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಮರಿಯ ದರ್ಶನಕ್ಕೆ ಸಾಲುಗಟ್ಟಿರುವ ಜನರು ಕಾಣಿಕೆಯಾಗಿ ಹಣದ ಸುರಿಮಳೆಗೈಯ್ಯುತ್ತಿದ್ದಾರೆ. ಜನರೇನೋ ದೇವರ ವರದಾನ ಎಂದು ಆರಾಧಿಸುತ್ತಿದ್ದಾರೆ. ಆದರೆ ಪಶು ವೈದ್ಯರು ಇದು ವಿಕೃತವಾಗಿ ಹುಟ್ಟಿರುವ ಮರಿ ಎನ್ನುತ್ತಿದ್ದಾರೆ. ಆದರೆ ವೈದ್ಯರ ವಾದವನ್ನು ಒಪ್ಪದಿರುವ ಜನರು, ಇದೇ ಮೊದಲ ಬಾರಿ