ಬೆಂಗಳೂರು: ಇಂದು ಮಹಾಶಿವರಾತ್ರಿ. ಮಾಘಮಾಸದಲ್ಲಿ ಬರುವ ಈ ದಿನ ಶಿವ ಭಕ್ತರಿಗೆ ವಿಶೇಷ ದಿನ. ಇಡೀ ದಿನ ಭಕ್ತಿಯಿಂದ ಶಿವನ ನಾಮ ಸ್ಮರಣೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಭಕ್ತರದ್ದು. ಶಿವರಾತ್ರಿಯೆಂದರೆ ರಾತ್ರಿಯಿಡೀ ಉಪವಾಸವಿದ್ದು, ಶಿವನಾಮ ಸ್ಮರಣೆಯಲ್ಲಿ ತೊಡಗುವುದು ಇಂದಿನ ವಿಶೇಷತೆ. ಅದಕ್ಕಾಗಿ ಉಪವಾಸ ಯಾಕೆ? ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಇದಕ್ಕೆ ಕಾರಣ ಶಿವ ಧ್ಯಾನ ಪ್ರಿಯ.ಧ್ಯಾನ ಮಾಡುವಾಗ ಮನಸ್ಸು, ದೇಹ ಶುದ್ಧವಾಗಿರಬೇಕೆಂಬ ಕಾರಣಕ್ಕೆ ಅಂದಿನ ದಿನ