ನವದೆಹಲಿ: ಭಾರತೀಯ ಸೈನಿಕರ ಪರಾಕ್ರಮಕ್ಕೆ ಥಂಡಾಹೊಡೆದ ಪಾಕಿಸ್ತಾನ ಸೇನೆಯನ್ನು ಭಾರತದ ಭೂಭಾಗದಿಂದ ಹೊರಗಟ್ಟಿದ ದಿನವೇ 1999 ಜುಲೈ 26. ಅದೇ ದಿನವನ್ನು ಕಾರ್ಗಿಲ್ ವಿಜಯೋತ್ಸವ ದಿನವೆಂದು ಆಚರಿಸಲಾಗುತ್ತದೆ. ಭಾರತದ ಗಡಿ ರೇಖೆಯನ್ನು ದಾಟಿ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡ ಪಾಕಿಸ್ತಾನದ ಕೃತ್ಯದಿಂದ ಭಾರತ ಬೆಚ್ಚಿ ಬೀಳುವಂತಾಗಿತ್ತು. ಆದರೆ, ವೀರಯೋಧರನ್ನು ಹೊಂದಿದ ಭಾರತೀಯ ಸೇನೆ ಕೆಲವೇ ದಿನಗಳಲ್ಲಿ ತನ್ನ ಪರಾಕ್ರಮವನ್ನು ತೋರಿ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿತು. ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು