ಪಾಕಿಸ್ತಾನ ಯಾವತ್ತೂ ತನ್ನ ಕುಕೃತ್ಯವನ್ನು ತೋರದೆ ಇರದು. ಶಾಂತವಾಗಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಭಾರತ ದೇಶದ ಮೇಲೆ ನಿರಂತರ ಪ್ರತಿಕಾರ ಕಾರುವುದು ಆ ದೇಶದ ಹುಟ್ಟು ಗುಣವಾಗಿದೆ. ಕಾಶ್ಮಿರದ ಕಾರ್ಗಿಲ್ ಜಿಲ್ಲೆಯಲ್ಲಿರುವ ನಿಯಂತ್ರಣ ರೇಖೆಯ ಗಡಿ ಬಳಿ 1999ರ ಮೇ ತಿಂಗಳಲ್ಲಿ ಇದ್ದಕಿದ್ದಂತೆ ಉದ್ರಿಕ್ತ ವಾತಾವರಣ ಕಾಣಿಸಿಕೊಂಡಿತು. ಕಾರ್ಗಿಲ್ನಲ್ಲಿರುವ ಗಡಿರೇಖೆಯೊಳಗೆ ಪಾಕಿಸ್ತಾನದ ಸೇನೆ ತಾನು ನುಗ್ಗಿದ್ದಲ್ಲದೇ ಉಗ್ರರನ್ನು ನುಗ್ಗಿಸಿ ಅಟ್ಟಹಾಸ ಮೆರೆಯಿತು. ಆರಂಭದಲ್ಲಿ ಇದೊಂದು ಉಗ್ರರ ಕಾಟ ಎಂದು ಭಾವಿಸಲಾಗಿತ್ತು.