ಟಾಟಾ ಓಪನ್‌ ಬ್ಯಾಡ್ಮಿಂಟನ್‌‌ : ಸೌರಭ್ ವರ್ಮಾ ಚಾಂಪಿಯನ್‌‌

ಸೋಮವಾರ, 16 ಡಿಸೆಂಬರ್ 2013 (16:09 IST)

PR
ಮುಂಬೈ: ಮುಂಬೈನಲ್ಲಿ ನಡೆದ 15000 ಡಾಲರ್‌ ಮೊತ್ತದ ಟಾಟಾ ಓಪನ್‌‌ ಬ್ಯಾಡ್ಮಿಂಟ್‌ನಲ್ಲಿ ನಾಲ್ಕನೇ ಶ್ರೇಯಾಂಕಿತ ಸೌರಭ ವರ್ಮಾ, ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ಮೂರನೇ ಶ್ರೇಯಾಂಕಿತ ಹೆಚ್‌‌.ಎಸ್‌.ಪ್ರಣಯ ವಿರುದ್ಧ ಜಯಗಳಿಸಿ ಚಾಂಪಿಯನ್‌ ಪಟ್ಟ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

30ನೇ ಡಿಸೆಂಬರ್‌‌ನಲ್ಲಿ 21 ವಯಸ್ಸಿಗೆ ತಲುಪುವ ಸೌರಭ ತಮಗಿಂತ ಹೆಚ್ಚಿನ ಶ್ರೇಯಾಂಕಿತರಾದ ಪ್ರಣಯರನ್ನು 30ನಿಮಿಷಗಳಲ್ಲಿ 21-12, 21-17 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ಪಂದ್ಯದಲ್ಲಿ ಪ್ರಣಯ ಕೆಲವು ತಪ್ಪುಗಳು ಮಾಡಿದ್ದರಿಂದ ಸೋಲುವಂತಾಗಿದೆ.

ಮಧ್ಯ ಪ್ರದೇಶದ ಧಾರಾನಲ್ಲಿ ಜನಿಸಿದ 60ನೇ ನಂಬರ್‌‌ ಆಟಗಾರ ಸೌರಭ್‌ಗೆ ಈ ಗೆಲುವಿನಿಂದ 4000 ವಿಶ್ವ ಶ್ರೇಯಾಂಕ ಮತ್ತು 67500 ರೂಪಾಯಿಯ ಬಹುಮಾನ ಕೂಡ ಲಭಿಸಿದೆ.ಇದರಲ್ಲಿ ಇನ್ನಷ್ಟು ಓದಿ :