ನವದೆಹಲಿ : ಮುಂದಿನ ವಾರ ನಡೆಯಲಿರುವ ಭಾರತದ ಪ್ರತಿಷ್ಟಿತ ದೆಹಲಿ ಗಾಲ್ಫ್ ಕ್ಲಬ್ ನಲ್ಲಿ ವಿಶ್ವದ ಅಗ್ರ ಶ್ರೇಣಿಯಲ್ಲಿರುವ ವುಡಸ್ ಭಾಗವಹಿಸಲಿದ್ದಾರೆ. 14 ಮೇಜರ್ ವಿಜೇತ ವುಡ್ಸ್ ಮಂಗಳವಾರ ಕೆಲವು ಪ್ರತಿಷ್ಠಿತ ಆಟಗಾರರ ವಿರುದ್ದ ಆಡಲಿದ್ದಾರೆ. ಇದರಲ್ಲಿ ಹಿರೋ ಮೋಟೋಪೋಪ್ರ ಪ್ರಧಾನ ನಿರ್ದೇಶಕ ಮತ್ತು ಸಿಇಓ ಪವನ್ ಮುಂಜಾಲ ಕೂಡ ಭಾಗವಹಿಸಲಿದ್ದಾರೆ. ವುಡ್ಸ್ ಕ್ಲಬ್ ಜೊತೆಗೆ ಮಾಡಿಕೊಂಡ ಕರಾರಿನ ಮೂಲಕವಾಗಿ ಸಹಿ ಕೂಡ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.