ಬೆಂಗಳೂರು: ಹಾಕಿ ಮಾಂತ್ರಿಕ ಧ್ಯಾನ್ಚಂದ್ ಭಾರತ ರತ್ನ ಪ್ರಶಸ್ತಿಯ ಹಕ್ಕುದಾರರಾಗಿದ್ದಾರೆ ಮತ್ತು ಈ ಪ್ರಶಸ್ತಿ ಧ್ಯಾನ್ಚಂದ್ ಅವರಿಗೆ ಸಿಗಲೇ ಬೇಕು ಎಂದು ಖ್ಯಾತ ಅಥ್ಲೆಟಿಕ ಮಿಲ್ಕಾಸಿಂಗ್ ಒತ್ತಾಯಿಸಿದ್ದಾರೆ . ಧ್ಯಾನ್ಚಂದ್ ಭಾರತರತ್ನ ಪ್ರಶಸ್ತಿಯ ಹಕ್ಕುದಾರ. ಇವರಂತಹ ಮತ್ತೊಬ್ಬ ಆಟಗಾರ ಹುಟ್ಟಿಬರಲು ಸಾಧ್ಯವಿಲ್ಲ . ಸಚಿನ ಅವರಿಗೆ ಭಾರತರತ್ನ ನೀಡಿರುವುದು ಸರಿಯಾಗಿದೆ , ಧ್ಯಾನ್ಚಂದ್ ಅವರಿಗೂ ಕೂಡ ಪ್ರಶಸ್ತಿ ನೀಡಬೇಕು ಎಂದು ಮಿಲ್ಕಾ ಸಿಂಗ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.