ಲಂಡನ್ : ಫುಟ್ಬಾಲ್ನ ವಿಶ್ವ ಮಟ್ಟದ ದೊಡ್ಡ ಸಂಸ್ಥೆಯಾದ ಫಿಫಾದ ಮಾಜಿ ಉಪ ಮಹಾ ಸಚಿವ ಫ್ರಾನ್ಸ್ನ ಜೆರೋಮ್ ಷಾಂಪೇನ್ ಮುಂದಿನ ದಿನಗಳಲ್ಲಿ ಫಿಫಾದ ಅಧ್ಯಕ್ಷ ಸ್ಥಾನದಲ್ಲಿ ಸ್ಪರ್ದಿಸಲು ಇಚ್ಛೆಯನ್ನು ವ್ಯಕ್ತ ಪಡಿಸಿದ್ದಾರೆ. ಲಂಡನನ್ನಲ್ಲಿ ಒಂದು ಸಮ್ಮೇಳನದಲ್ಲಿ ಫಿಫಾದ ಅಧ್ಯಕ್ಷ ಸ್ಥಾನ ಪಡೆದುಕೊಳ್ಳುವ ವಿಚಾರ ವ್ಯಕ್ತ ಪಡಿಸಿದ್ದಾರೆ ಮತ್ತು ಈ ಸಮ್ಮೆಳನದ ಮೂಲಕ ತಮ್ಮ ಪ್ರಚಾರ ಪ್ರಾರಂಭಿಸಿದ್ದಾರೆ. ನಾನು 2015ರಲ್ಲಿ ನಡೆಯಲಿರುವ ಫೀಫಾ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೆನೆ ಎಂದು ಸಮ್ಮೇಳನದಲ್ಲಿ ಷಾಂಪೇನ್ ತಿಳಿಸಿದ್ದಾರೆ .