ಇಂದಿನಿಂದ ಚೀನಾ ಓಪನ್: ಸಿಂಧು, ಸೈನಾ ಮೇಲೆ ಎಲ್ಲರ ಕಣ್ಣು

ನವದೆಹಲಿ| Krishnaveni K| Last Modified ಮಂಗಳವಾರ, 17 ಸೆಪ್ಟಂಬರ್ 2019 (10:12 IST)
ನವದೆಹಲಿ: ಇಂದಿನಿಂದ ಪ್ರತಿಷ್ಠಿತ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭವಾಗಲಿದ್ದು, ಭಾರತದ ಪಿವಿ ಸಿಂಧು ಮತ್ತು ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

 
ಕಳೆದ ತಿಂಗಳಷ್ಟೇ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದು ಭಾರತಕ್ಕೆ ಕೀರ್ತಿ ತಂದುಕೊಟ್ಟ ಸಿಂಧು ಮೇಲೆ ಹೆಚ್ಚಿನ ಭರವಸೆ ಭಾರತೀಯರಲ್ಲಿದೆ. 2016 ರಲ್ಲಿ ಸಿಂಧು ಚೀನಾ ಓಪನ್ ಗೆದ್ದು ಸಾಧನೆ ಮಾಡಿದ್ದರು.
 
ಮತ್ತೊಂದೆಡೆ ಸೈನಾ ನೆಹ್ವಾಲ್ ಕೂಡಾ ರೇಸ್ ನಲ್ಲಿದ್ದು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್ ನ ಬುಸನಾನ್ ಒಂಗ್ಟಾಮುಂಗ್ರಪಾನ್ ವಿರುದ್ಧ ಸೆಣಸಲಿದ್ದಾರೆ. ಸೈನಾ ಕೂಡಾ ಒಂದು ಬ್ರೇಕ್ ನ ನಿರೀಕ್ಷೆಯಲ್ಲಿದ್ದಾರೆ. ಈ ಟೂರ್ನಿ ಗೆದ್ದವರಿಗೆ 1,000,000 ಡಾಲರ್ ಬಹುಮಾನ ಮೊತ್ತ ಸಿಗಲಿದೆ.
ಇದರಲ್ಲಿ ಇನ್ನಷ್ಟು ಓದಿ :