ರೊನಾಲ್ಡೊರಿಂದ ಸಾವಿರಾರು ಕೋಟಿ ನಷ್ಟ ಅನುಭವಿಸಿದ ಕೊಕಾಕೋಲಾ ಸಂಸ್ಥೆ

ಹಂಗೇರಿ| Krishnaveni K| Last Modified ಗುರುವಾರ, 17 ಜೂನ್ 2021 (09:39 IST)
ಹಂಗೇರಿ: ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಮಾಡಿದ ಸನ್ನೆಯೊಂದು ಕೊಕಾಕೋಲಾ ಸಂಸ್ಥೆಗೆ ಸಾವಿರಾರು ಕೋಟಿ ರೂ. ನಷ್ಟ ತಂದಿದೆ.

 

ಪತ್ರಿಕಾಗೋಷ್ಠಿ ವೇಳೆ ತಮ್ಮ ಎದುರಿಗಿದ್ದ ಕೊಕಾಕೋಲಾ ಬಾಟಲಿಯನ್ನು ಪಕ್ಕಕ್ಕಿಟ್ಟು ನೀರು ಕುಡಿಯಿರಿ ಎಂದು ರೊನಾಲ್ಡೊ ಸನ್ನೆ ಮಾಡಿದ್ದಕ್ಕೆ ಸಂಸ್ಥೆ 29,330 ಕೋಟಿ ರೂ. ನಷ್ಟ ಅನುಭವಿಸಿದೆ! ಪತ್ರಿಕಾಗೋಷ್ಠಿ ಮುಗಿಯುವಷ್ಟರಲ್ಲಿ ಕಂಪನಿಯ 1 ಷೇರಿನ ಬೆಲೆ 56.10 ಡಾಲರ್ ನಿಂದ 55.22 ಡಾಲರ್ ಗೆ ಕುಸಿದಿದೆ.
 
ರೊನಾಲ್ಡೊರ ಈ ಕೆಲಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ರೀಡಾಳುಗಳು ಫಿಟ್ ಆಗಿರಬೇಕು. ಕೊಕಾಕೋಲಾದಂತಹ ಕಾರ್ಬೋನೇಟ್ ಅಂಶವಿರುವ ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಕ್ಕಾಗಿಯೇ ರೊನಾಲ್ಡೋ ಈ ರೀತಿ ಸನ್ನೆ ಮಾಡಿದ್ದರು. ಆದರೆ ಅವರ ಸನ್ನೆಯಿಂದ ಭಾರೀನ ನಷ್ಟವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :