ದಕ್ಷಿಣ ಆಫ್ರಿಕಾದ ಮಧ್ಯಮ ವೇಗಿ ಡೇಲ್ ಸ್ಟೇನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಪದೇಪದೆ ಕಾಡುವ ಗಾಯದ ಸಮಸ್ಯೆಯಿಂ ದ ಬಳಲುತ್ತಿದ್ದ ಡೇಲ್ ಸ್ಟೇನ್ ಮಂಗಳವಾರ ನಿವೃತ್ತಿ ಘೋಷಿಸುವ ಮೂಲಕ 16 ವರ್ಷಗಳ ಕ್ರಿಕೆಟ್ ಬದುಕಿನಿಂದ ತೆರೆಮರೆಗೆ ಸರಿದಿದ್ದಾರೆ. 2021ರ ಐಪಿಎಲ್ ನಿಂದ ಹಿಂದೆ ಸರಿದಿದ್ದ ಸ್ಟೇನ್ ಜಾಗತಿಕ ಕ್ರಿಕೆಟ್ ಕಂಡ ಅದ್ಭುತ ಬೌಲರ್ ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ 439 ವಿಕೆಟ್ ಪಡೆದಿರುವ