ಓಟದ ದಂತಕತೆ ಮಿಲ್ಖಾಸಿಂಗ್ ಇನ್ನಿಲ್ಲ: ಪ್ರಧಾನಿ ಮೋದಿ ಸಂತಾಪ

ನವದೆಹಲಿ| Krishnaveni K| Last Modified ಶನಿವಾರ, 19 ಜೂನ್ 2021 (09:41 IST)
ನವದೆಹಲಿ: ಓಟದ ದಂತಕತೆ ಮಿಲ್ಖಾಸಿಂಗ್ ಇನ್ನಿಲ್ಲ. ಕೊರೋನಾದಿಂದಾಗಿ 91 ವರ್ಷದ ಮಿಲ್ಖಾಸಿಂಗ್ ನಿನ್ನೆ ರಾತ್ರಿ 11.30 ಕ್ಕೆ ನಿಧನರಾಗಿದ್ದಾರೆ.
 

ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಬಾರಿ ಚಿನ್ನದ ಪದಕ, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಾಂಪಿಯನ್ ಆಗಿದ್ದ ಅವರು ಅನೇಕ ಯುವ ಪ್ರತಿಭೆಗಳಿಗೆ ಆದರ್ಶವಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಿಮ್ಮ ಜೊತೆಗೆ ಮಾತನಾಡಿದ್ದೆ. ಆಗ ಇಂದು ನೀವು ನಮ್ಮನ್ನು ಅಗಲುತ್ತೀರಿ ಎಂದುಕೊಂಡಿರಲಿಲ್ಲ. ನೀವು ಹಲವು ಯುವಕರಿಗೆ ಆದರ್ಶವಾಗಿದ್ದಿರಿ ಎಂದು ಪ್ರಧಾನಿ ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
 
ಕಳೆದ ವಾರವಷ್ಟೇ ಮಿಲ್ಖಾಸಿಂಗ್ ಪತ್ನಿ ಕೊರೋನಾದಿಂದಾಗಿ ಸಾವನ್ನಪ್ಪಿದ್ದರು. ಕಳೆದ ತಿಂಗಳಿನಿಂದ ಮಿಲ್ಖಾಸಿಂಗ್ ಗೂ ಕೊರೋನಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಬಳಿಕ ನೆಗೆಟಿವ್ ವರದಿ ಬಂದಿತ್ತು. ಆದರೆ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೊನೆಯುಸಿರರೆಳೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :