ನನಗೆ ಸಿಗಬೇಕಾದ ಗೌರವ ಐಪಿಎಲ್ ನಲ್ಲಿ ಸಿಗಲಿಲ್ಲ ಎಂದು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಪಿಎಲ್ ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಕ್ರಿಸ್ ಗೇಲ್ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ಹಾಗಾಗಿ ಅವರು ಐಪಿಎಲ್ ನಿಂದ ಹೊರಗುಳಿಯಬೇಕಾಗಿದೆ. ಬೌಲರ್ ಗಳು ದುಸ್ವಪ್ನವಾಗಿ ಕಾಡುತ್ತಿದ್ದ ಗೇಲ್ ಐಪಿಎಲ್ ನಿಂದ ಹೊರಗುಳಿದಿರುವ ಬಗ್ಗೆ ಮೊದಲ ಬಾರಿ ಬಾಯಿಬಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಐಪಿಎಲ್ ನಲ್ಲಿ