ವಿರಾಟ್ ಕೊಹ್ಲಿಗೆ ಜೀವ ಬೆದರಿಕೆ : ಟೀಂ ಇಂಡಿಯಾ ಆಟಗಾರರಿಗೆ ಬಿಗಿ ಭದ್ರತೆ

ಮುಂಬೈ| Jagadeesh| Last Updated: ಮಂಗಳವಾರ, 29 ಅಕ್ಟೋಬರ್ 2019 (16:33 IST)
ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಯನ್ನು ಹತ್ಯೆ ಮಾಡೋದಾಗಿ ಅಲ್ ಇಂಡಿಯಾ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆ ಬೆದರಿಕೆ ಹಾಕಿದೆ.

ಉಗ್ರ ಸಂಘಟನೆ ಹಾಕಿರುವ ಬೆದರಿಕೆಯಿಂದಾಗಿ ಟೀಂ ಇಂಡಿಯಾ ನಾಯಕ ಹಾಗೂ ಆಟಗಾರರಿಗೆ ಬಿಗಿ ಭದ್ರತೆ ಒದಗಿಸುವಂತೆ ಎನ್ ಐ ಎ ಖಡಕ್ ಸೂಚನೆ ನೀಡಿದೆ.

ನವೆಂಬರ್ 3 ರಿಂದ ಬಾಂಗ್ಲಾ ವಿರುದ್ಧ ಟಿ – 20 ಪಂದ್ಯಗಳು ನಡೆಯುವ ಮೊದಲೇ ಭಯೋತ್ಪಾದಕರ ಕಾಟ ಆವರಿಸಿದೆ.
ಬಾಂಗ್ಲಾ ಹಾಗೂ ಭಾರತ ತಂಡಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ. ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :