ಸೈನಾ ನೆಹ್ವಾಲ್ ಜತೆಗಿನ ವಿರಸದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಕೋಚ್ ಗೋಪಿಚಂದ್

ಹೈದರಾಬಾದ್| Krishnaveni K| Last Modified ಸೋಮವಾರ, 13 ಜನವರಿ 2020 (08:57 IST)
ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕೋಚ್ ಗೋಪಿಚಂದ್ ನಡುವೆ ಅಂದು ಮೂಡಿದ್ದ ವಿರಸದ ಬಗ್ಗೆ ಇದೀಗ ಸ್ವತಃ ಗೋಪಿಚಂದ್ ಮಾತನಾಡಿದ್ದಾರೆ.
 

ಪಿ ವಿ ಸಿಂಧು ಬಗ್ಗೆ ಗೋಪಿಚಂದ್ ಹೆಚ್ಚು ಗಮನಕೊಡುತ್ತಿದ್ದಾರೆ ಎಂಬ ಅಸಮಾಧಾನದಿಂದ ಸೈನಾ ಮೆಚ್ಚಿನ ಗುರು ಗೋಪಿಚಂದ್ ಮೇಲೆ ಮುನಿಸಿಕೊಂಡು ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದರು. ಕೆಲವು ಸಮಯದ ಬಳಿಕ ಇಬ್ಬರೂ ವಿರಸ ಮರೆತು ಸೈನಾ ಮತ್ತೆ ಗೋಪಿಚಂದ್ ಅಕಾಡೆಮಿ ಸೇರಿಕೊಂಡಿದ್ದರು.
 
ಈ ಬಗ್ಗೆ ಇದೀಗ ಗೋಪಿಚಂದ್ ತಮ್ಮ ‘ಡ್ರೀಮ್ಸ್ ಆಫ್ ಎ ಬಿಲಿಯನ್’ ಎಂಬ ಪುಸ್ತಕದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಂದು ನಾನು ಸೈನಾಗೆ ಹೋಗಬೇಡ ಎಂದು ಅಂಗಲಾಚಿದ್ದೆ. ಆದರೆ ಅದಾಗಲೇ ಸೈನಾ ನಿರ್ಧರಿಸಿಯಾಗಿತ್ತು. ಆಕೆಯನ್ನು ಆಗ ಬೇರೆಯವರು ಆ ರೀತಿ ಮಾಡಿದ್ದರು. ಕೊನೆಗೆ ವಿಪರೀತ ಒತ್ತಾಯ ಮಾಡುವುದು ಇಬ್ಬರಿಗೂ ಸರಿಯಲ್ಲವೆನಿಸಿ ಆಕೆಯನ್ನು ಅವಳ ಪಾಡಿಗೆ ಬಿಟ್ಟೆ ಎಂದು ಗೋಪಿಚಂದ್ ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಮಾಜಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಬಗ್ಗೆಯೂ ಅವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :