ವಿಶ್ವ ಚಾಂಪಿಯನ್ ಆದ ಪಿವಿ ಸಿಂಧುಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ, ಭಾನುವಾರ, 25 ಆಗಸ್ಟ್ 2019 (20:00 IST)

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಮಾಡಿದ ಪಿವಿ ಸಿಂಧುಗೆ ಪ್ರಧಾನಿ ಮೋದಿ ಸೇರಿದಂತೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

 


ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಸಿಂಧು ನಝೋಮಿ ಒಖುಹರಾ ವಿರುದ್ಧ 21-7, 21-7 ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಿಶ್ವ ನಂ. 5 ನೇ ರ್ಯಾಂಕಿಂಗ್ ನ ಸಿಂಧು ತನಗಿಂತ ಮೇಲ್ಪಂಕ್ತಿಯ ಆಟಗಾರ್ತಿಯನ್ನು ಸೋಲಿಸಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.
 
ಈ ಗೆಲುವಿಗೆ ಪ್ರಧಾನಿ ಮೋದಿ ಸೇರಿದಂತೆ ದೇಶವೇ ಸಿಂಧುಗೆ ಅಭಿನಂದನೆ ಸಲ್ಲಿಸಿದೆ. ನಿಮ್ಮ ಈ ಸಾಧನೆ ಹಲವರಿಗೆ ಸ್ಪೂರ್ತಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಇನ್ನು ಗೆಲುವಿನ ಬಳಿಕ ಮಾತನಾಡಿರುವ ಪಿವಿ ಸಿಂಧು ಈ ಗೆಲುವನ್ನು ತಮ್ಮ ತಾಯಿಗೆ ಅರ್ಪಿಸಿದ್ದಾರೆ. ಇದು ಅವರ ಜನ್ಮದಿನಕ್ಕೆ ನನ್ನ ಉಡುಗೊರೆ ಎಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾಯಕ-ಉಪನಾಯಕನ ಜತೆಯಾಟ: ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನಾಟದ ಅಂತ್ಯಕ್ಕೆ ...

news

ಅರುಣ್ ಜೇಟ್ಲಿ ಗೌರವಾರ್ಥ ಕಪ್ಪು ಪಟ್ಟಿ ಧರಿಸಿ ಆಡಿದ ಟೀಂ ಇಂಡಿಯಾ

ಆಂಟಿಗುವಾ: ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿ ಟೀಂ ಇಂಡಿಯಾ ...

news

ಅರುಣ್ ಜೇಟ್ಲಿ ನಿಧನದಿಂದ ಸೆಹ್ವಾಗ್ ಗೆ ಅಷ್ಟೊಂದು ದುಃಖವಾಗಿದ್ದೇಕೆ ಗೊತ್ತಾ?

ನವದೆಹಲಿ: ಮಾಜಿ ವಿತ್ತ ಸಚಿವ, ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದ ಅರುಣ್ ಜೇಟ್ಲಿ ...

news

ಆಯ್ಕೆಗಾರ ಸ್ಥಾನ ಅನಿಲ್ ಕುಂಬ್ಳೆಗೆ ಸಿಗಲಿ, ಟೀಂ ಇಂಡಿಯಾ ಕೋಚ್ ಸ್ಥಾನ ನನಗಿರಲಿ ಎಂದ ಸೌರವ್ ಗಂಗೂಲಿ

ಮುಂಬೈ: ಟೀಂ ಇಂಡಿಯಾ ಆಯ್ಕೆಗಾರನ ಮುಖ್ಯಸ್ಥನಾಗಿ ಅನಿಲ್ ಕುಂಬ್ಳೆ ನೇಮಕವಾಗಬೇಕು ಎಂದು ಮಾಜಿ ಕ್ರಿಕೆಟಿಗ ...