ನವದೆಹಲಿ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಪರಸ್ಪರ ಅಭಿಪ್ರಾಯ ಹಂಚಿಕೊಂಡಿದ್ದೇ ಕಡಿಮೆ. ಆದರೆ ನಿನ್ನೆ ಸಿಂಧು ಆಡಿದ ರೀತಿ ನೋಡಿ ಅಲ್ಲೇ ಇದ್ದ ಸೈನಾ ಹೇಳಿದ ಅಭಿಪ್ರಾಯ ಮಾತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿ ಹಿರಿಯ ತಾರೆ ಸೈನಾ ತಮಗಿಂತ ಕಿರಿಯವಳಾದ ಸಿಂಧು ಆಟ ನೋಡುವುದಕ್ಕೆಂದು ಗ್ಯಾಲರಿಯಲ್ಲಿದ್ದರು. ಸಿಂಧು ಕಾದಾಡಿದ ಪರಿ ನೋಡಿ ನಿಬ್ಬೆರಗಾದ ಸೈನಾ ಸೀದಾ