ಹೈದರಾಬಾದ್: ಬ್ಯಾಡ್ಮಿಂಟನ್ ಕೋಚಿಂಗ್ ಗಾಗಿ ಬೆಂಗಳೂರು-ಹೈದರಾಬಾದ್ ನಡುವೆ ಓಡಾಡಿ ಬಹುಶಃ ಸೈನಾ ನೆಹ್ವಾಲ್ ಗೂ ಸುಸ್ತಾಗಿರಬೇಕು. ಅದಕ್ಕೆ ಅವರು ಮತ್ತೆ ಹಳೇ ಗುರುವಿನ ಪಾದ ಹಿಡಿದಿದ್ದಾರೆ. ಇದರ ಬಗ್ಗೆ ಅವರೇ ಫೇಸ್ ಬುಕ್ ನಲ್ಲಿ ಸ್ಪಷ್ಟನೆಯನ್ನೂ ನೀಡಿದ್ದಾರೆ. 2014 ರಲ್ಲಿ ಕೋಚ್ ಗೋಪಿಚಂದ್ ಜತೆ ಮುನಿಸುಕೊಂಡು ವಿಮಲ್ ಕುಮಾರ್ ಗೂಡು ಸೇರಿಕೊಂಡಿದ್ದ ಸೈನಾ ಫಾರ್ಮ್ ಮರಳಿ ಪಡೆಯಲು ಹಳೇ ಗುರುವಿನ ಅಕಾಡೆಮಿ ಸೇರಿದ್ದಾರೆ. ಈ ಬಗ್ಗೆ ಬಂದ ಸುದ್ದಿಗಳಿಗೆ