ನವದೆಹಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಾವು ಒಲಿಂಪಿಕ್ಸ್ ಗೆ ಹೋಗಿದ್ದೇ ತಪ್ಪಾಯ್ತು ಎಂದಿದ್ದಾರೆ. ಅವರು ಹೀಗೇಕೆ ಹೇಳಿದರು? ವರ್ಲ್ಡ್ ಚಾಂಪಿಯನ್ ಶಿಪ್ ನ ಸೆಮಿಫೈನಲ್ ಹಂತ ತಲುಪಿರುವ ಸೈನಾ ನೆಹ್ವಾಲ್ ಒಂದು ವರ್ಷದ ಹಿಂದೆ ರಿಯೋ ಒಲಿಂಪಿಕ್ಸ್ ಸೋಲನ್ನು ನೆನಪಿಸಿಕೊಂಡಿದ್ದಾರೆ.ಆಗ ಏನಾಗಿತ್ತು ಎಂದು ನನಗೆ ಮಾತ್ರ ಗೊತ್ತು. ನಾನು ರಿಯೋಗೆ ಹೋಗಲೇ ಬಾರದಿತ್ತು. ನನಗೆ ಆಗ ಅಷ್ಟು ದೊಡ್ಡ ಗಾಯವಿದೆ ಎಂದು ಗೊತ್ತೇ ಇರಲಿಲ್ಲ.