Widgets Magazine

ಸಾನಿಯಾ ಮಿರ್ಜಾ ಅವಸ್ಥೆಯೇ..! ಪತಿ ಶೊಯೇಬ್ ಮಲಿಕ್ ಗೆ ವಿಶ್ ಮಾಡೋ ಹಾಗೂ ಇಲ್ಲ!!

ಹೈದರಾಬಾದ್| Krishnaveni K| Last Modified ಗುರುವಾರ, 6 ಜೂನ್ 2019 (09:37 IST)
ಹೈದರಾಬಾದ್: ವಿಶ್ವಕಪ್ ಇರಲಿ, ಯಾವುದೇ ಮಹತ್ವದ ಕ್ರಿಕೆಟ್ ಟೂರ್ನಿಯಿರಲಿ. ಪಾಕ್ ಕ್ರಿಕೆಟಿಗ ಪತಿ ಶೊಯೇಬ್ ಮಲಿಕ್ ಗೆ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಶ್ ಮಾಡಿದರೆ ದೊಡ್ಡ ವಿವಾದವೇ ಆಗಿ ಹೋಗುತ್ತದೆ.

 
ಭಾರತೀಯ ಟೆನಿಸ್ ತಾರೆಯ ಈ ಸಂದಿಗ್ಧ ಅವಸ್ಥೆಗೆ ಇದೀಗ ಅಭಿಮಾನಿಗಳೇ ಅಯ್ಯೋ ಪಾಪ ಎನ್ನುತ್ತಿದ್ದಾರೆ. ವಿಶ್ವಕಪ್ 2019 ರಲ್ಲಿ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತು ಎರಡನೇ ಪಂದ್ಯದಲ್ಲಿ ಅದ್ಭುತವಾಗಿ ಕಮ್ ಬ್ಯಾಕ್ ಮಾಡಿ ಪ್ರಬಲ ಇಂಗ್ಲೆಂಡ್ ಮಣಿಸಿದ್ದಕ್ಕೆ ಸಾನಿಯಾ ಪಾಕ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು.
 
ಈ ಟೂರ್ನಮೆಂಟ್ ನಲ್ಲಿ ಯಾರೂ ಫೇವರಿಟ್ ಅಲ್ಲ ಎನ್ನುವುದನ್ನು ಪಾಕ್ ತಂಡ ನಿರೂಪಿಸಿದೆ. ಅಭಿನಂದನೆಗಳು ಎಂದು ಸಾನಿಯಾ ಹೊಗಳಿದ್ದರು. ಇದಕ್ಕೆ ಈಗ ಅವರು ಟ್ವಿಟರ್ ನಲ್ಲಿ ಟ್ರೋಲ್ ಆಗಿದ್ದಾರೆ.
 
ಪಾಪ ಸಾನಿಯಾಗೆ ನೇರವಾಗಿ ಪತಿಗೆ ವಿಶ್ ಮಾಡೋ ಹಾಗೂ ಇಲ್ಲ ಎಂದು ಕಾಲೆಳೆದಿದ್ದರೆ ಇನ್ನು ಕೆಲವರು ಭಾರತದ ಜತೆಗೆ ಇನ್ನೂ ಪಂದ್ಯ ಬಾಕಿಯಿದೆ ಸಹೋದರಿ ಎಂದು ಟಾಂಗ್ ಕೊಟ್ಟಿದ್ದಾರೆ.  ಹಿಂದೊಮ್ಮೆ ಭಾರತ-ಪಾಕ್ ಪಂದ್ಯವಿದ್ದಾಗ ಸಾನಿಯಾ ವಿವಾದವೇ ಬೇಡವೆಂದು ಟ್ವಿಟರ್ ನಿಂದ ಒಂದು ವಾರ ಕಾಲ ದೂರವಿದ್ದರು.  ಈ ಬಾರಿ ವಿಶ್ವಕಪ್ ನಲ್ಲಿ ಭಾರತ-ಪಾಕ್ ನಡುವೆ ಜೂನ್ 16 ರಂದು ಪಂದ್ಯ ನಡೆಯುತ್ತಿದೆ. ಆವತ್ತು ಏನಾಗುತ್ತೋ ಕಾದು ನೋಡಬೇಕು!
ಇದರಲ್ಲಿ ಇನ್ನಷ್ಟು ಓದಿ :