ಬರಲಿದೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಜೀವನಾಧರಿತ ಸಿನಿಮಾ!

bengaluru| geethanjali| Last Modified ಮಂಗಳವಾರ, 13 ಜುಲೈ 2021 (15:59 IST)

ಈಗಾಗಲೇ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಮುಂತಾದವರ ಸಿನಿಮಾ ತೆರೆ ಮೇಲೆ ಬಂದಿದೆ. ಇದೀಗ ರಾಹುಲ್ ದ್ರಾವಿಡ್ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಬ್ಬ ಮಾಜಿ ಸ್ಟಾರ್ ಕ್ರಿಕೆಟಿಗನ ಜೀವನಾಧಾರಿತ ಸಿನಿಮಾ ತೆರೆಗೆ ಬರಲು ಸಿದ್ಧತೆ ಆರಂಭವಾಗಿದೆ.

ಮೂಲಗಳ ಪ್ರಕಾರ ಈ ಸಿನಿಮಾ 200ರಿಂದ 250 ಕೋಟಿ ರೂ. ಬಜೆಟ್ ನಲ್ಲಿ ಸಿದ್ಧಗೊಳ್ಳಲಿದ್ದು, ಗಂಗೂಲಿ ಪಾತ್ರವನ್ನು ರಣಭೀರ್ ಕಪೂರ್ ನಿರ್ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸ್ಥಳೀಯ ಮಾಧ್ಯಮಕ್ಕೆ ಗಂಗೂಲಿ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನಾಧಾರಿತ ಸಿನಿಮಾಗೆ ಒಪ್ಪಿಗೆ ನೀಡಿದ್ದೇನೆ. ನಿರ್ದೇಶಕ ಯಾರು ಎಂದು ಈಗಲೇ ಹೇಳಲು ಆಗದು. ಆದರೆ ರಣಭೀರ್ ಕಪೂರ್ ಜೊತೆ ಮಾತುಕತೆ ನಡೆದಿದೆ ಎಂದು ತಿಳಿದಿದೆ ಎಂದು ಸುಳಿವು ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :