ನವದೆಹಲಿ: ಭಾರತದಲ್ಲಿ ಒಲಿಂಪಿಕ್ಸ್ ಇದುವರೆಗೆ ಆಯೋಜನೆಯಾಗಿಲ್ಲ. ಒಲಿಂಪಿಕ್ಸ್ ಆಯೋಜಿಸುವ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. 2036 ರವರೆಗೆ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿರುವುದಾಗಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ನರೇಂದ್ರ ಭಾತ್ರಾ ಹೇಳಿದ್ದಾರೆ.2036 ರ ವೇಳೆಗೆ ಗುಜರಾತ್ ನಲ್ಲಿರುವ ವಿಶ್ವದ ಬೃಹತ್ ಕ್ರೀಡಾಂಗಣ ಅಹಮ್ಮದಾಬಾದ್ ಮೈದಾನದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಸಿದ್ಧತೆ ನಡೆಯುತ್ತಿದೆಯಂತೆ. ಈ ಕೂಟಕ್ಕೆ ಭಾರತ ಬಿಡ್ ಸಲ್ಲಿಸಲಿದೆ.