ಆರ್ಚರಿ ವಿಶ್ವಕಪ್ ನಲ್ಲಿ ಕೊಲಂಬಿಯಾ ತಂಡವನ್ನು ಮಣಿಸಿರುವ ಭಾರತದ ಕಾಂಪೌಂಡ್ ಆರ್ಚರಿ ತಂಡ ಚಿನ್ನದ ಪದಕವನ್ನು ಗೆದ್ದಿದೆ. ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಸ್ಟೇಜ್ -1ರ ಫೈನಲ್ ನಲ್ಲಿ ಕೊಲಂಬಿಯಾ ತಂಡದ ವಿರುದ್ಧ ಭಾರತ ಪುರುಷರ ತಂಡ 226-221 ಅಂಕಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಭಾರತದ ತಂಡವನ್ನು ಅಭಿಷೇಕ್ ವರ್ಮಾ, ಚಿನ್ನರಾಜು ಶ್ರೀಧರ್, ಅಮನ್ಜಿತ್ ಸಿಂಗ್ ಪ್ರತಿನಿಧಿಸಿದ್ದರು. ಕೊಲಂಬಿಯಾ ತಂಡದಲ್ಲಿ