Photo Courtesy: Twitterಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮತ್ತೊಂದು ಐತಿಹಾಸಿಕ ಪದಕ ಗೆದ್ದುಕೊಂಡಿದೆ. ಅಥ್ಲೆಟಿಕ್ಸ್ ನಲ್ಲಿ ಶಾಟ್ ಫುಟ್ ತಾರೆ ಕಿರಣ್ ಬಾಲಿಯಾನ್ 72 ವರ್ಷಗಳ ಬಳಿಕ ಮೊದಲ ಕಂಚು ಗೆದ್ದುಕೊಟ್ಟಿದ್ದಾರೆ.ಶಾಟ್ ಪುಟ್ ನಲ್ಲಿ ಕಳೆದ 72 ವರ್ಷಗಳಲ್ಲಿ ಭಾರತ ಏಷ್ಯಾಡ್ ಪದಕ ಗೆದ್ದಿರಲಿಲ್ಲ. ಇದಕ್ಕೆ ಮೊದಲು 1951 ರಲ್ಲಿ ಆಂಗ್ಲೋ-ಇಂಡಿಯನ್ ತಾರೆ ಬಾರ್ಬರಾ ವೆಬ್ ಸ್ಟರ್ ಶಾಟ್ ಪುಟ್ ನಲ್ಲಿ ಕಂಚು ಗೆದ್ದಿದ್ದರು.