ಟೋಕಿಯೋ: ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಆರ್ಚರಿ ತಾರೆಯರು ಈ ಬಾರಿಯ ಒಲಿಂಪಿಕ್ಸ್ ನಲ್ಲಿ ನಿರಾಸೆ ಮೂಡಿಸಿದ್ದಾರೆ. ಅದರಲ್ಲೂ ದೀಪಿಕಾ ಕುಮಾರಿ ಮತ್ತು ಅತನು ದಾಸ್ ದಂಪತಿ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಇಬ್ಬರೂ ಸೋತು ನಿರ್ಗಮಿಸಿದ್ದಾರೆ. ಪ್ರಿ ಕ್ವಾರ್ಟರ್ ಫೈನಲ್ ಗೇರಿದ್ದ ಅತನು ದಾಸ್ ಸೋತು ಪದಕದ ಭರವಸೆ ಭಗ್ನಗೊಳಿಸಿದ್ದಕ್ಕೆ ಭಾರತೀಯರ ಕ್ಷಮೆ ಕೇಳಿದ್ದಾರೆ. ‘ಸಾರಿ ಇಂಡಿಯಾ. ನನಗೆ ಒಲಿಂಪಿಕ್ಸ್ ಮೆಡಲ್ ಭಾರತಕ್ಕೆ ತರಲು ಸಾಧ್ಯವಾಗಲಿಲ್ಲ. ಆದರೆ ನಮಗೆ ಸಿಕ್ಕ