ನವದೆಹಲಿ: ಮುಂಬೈ ತಂಡವನ್ನು 4-3 ರಿಂದ ಸೋಲಿಸಿ ಚೆನ್ನೈ ವಾರಿಯರ್ಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ 2 ನೇ ಋತುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ತಂಡಕ್ಕೆ ಚಾಂಪಿಯನ್ ಪಟ್ಟ ಲಭಿಸಿದೆ. ಎರಡೂ ತಂಡಗಳು ಸಮಬಲ ಹೋರಾಟ ನೀಡಿತ್ತು. ಆದ್ದರಿಂದ ಕೊನೆಯಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಮುಂಬೈನ ಅಜಯ್ ಜಯರಾಮ್ ಸೋಲೊಪ್ಪುವುದರೊಂದಿಗೆ ಚೆನ್ನೈ ಗೆಲುವು ಖಾತ್ರಿಯಾಯ್ತು.ಮಹಿಳಾ ಸಿಂಗಲ್ಸ್ ನಲ್ಲಿ ನಿನ್ನೆ ನಡೆದ