Photo Courtesy: Twitterಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಜ್ಯಾವೆಲಿನ್ ಥ್ರೋ ವಿಭಾಗದ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಮತ್ತು ಕಿಶೋರ್ ಜೀನಾಗೆ ಅಧಿಕಾರಿಗಳಿಂದ ಮೋಸವಾಗಿದೆ.ಮೊದಲು ನೀರಜ್ ಚೋಪ್ರಾ ಮೊದಲ ಎಸೆತವನ್ನು ಅಧಿಕಾರಿಗಳು ಸರಿಯಾಗಿ ಗುರುತಿಸದೇ ತಾಂತ್ರಿಕ ವೈಫಲ್ಯದ ಕಾರಣ ನೀಡಿ ಮತ್ತೊಮ್ಮೆ ಥ್ರೋ ಮಾಡಲು ಸೂಚಿಸಲಾಯಿತು. ಮೊದಲ ಎಸೆತದಲ್ಲಿ ನೀರಜ್ 85 ಮೀ. ಗೂ ಅಧಿಕ ದೂರ ಎಸೆದಿದ್ದರು. ಆದರೆ ಇದು ಪರಿಗಣಿತವಾಗಲೇ ಇಲ್ಲ.