Widgets Magazine

ಕೊರೊನಾ ಭೀತಿ: ಒಲಿಂಪಿಕ್ಸ್ ರದ್ದಾದರೆ ಜಪಾನ್ ಗೆ ಲಕ್ಷ ಕೋಟಿ ನಷ್ಟ

ಟೋಕಿಯೋ| Krishnaveni K| Last Modified ಬುಧವಾರ, 4 ಮಾರ್ಚ್ 2020 (10:13 IST)
ಟೋಕಿಯೋ: ಕೊರೊನಾವೈರಸ್ ಮಾರಕ ರೋಗ ಈಗ ಚೀನಾ ಮಾತ್ರವಲ್ಲದೆ, ಭಾರತ, ಜಪಾನ್, ದ.ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹರಡುತ್ತಿದೆ. ಇದರಿಂದಾಗಿ ಹಲವು ಕ್ರೀಡಾ ಕೂಟಗಳು ರದ್ದಾಗುವ ಭೀತಿಯಲ್ಲಿದೆ.

 
ಜಪಾನ್ ನಲ್ಲಿ ಜುಲೈನಲ್ಲಿ ಒಲಿಂಪಿಕ್ ಕ್ರೀಡಾ ಕೂಟ ಆಯೋಜನೆಯಾಗಿದ್ದು, ಇದಕ್ಕಾಗಿ ಅಲ್ಲಿನ ಸರ್ಕಾರ ಲಕ್ಷ ಕೋಟಿ ರೂ. ಬಂಡವಾಳ ಹೂಡಿದೆ. ಆದರೆ ಕೊರೊನಾ ಭೀತಿಯಿಂದಾಗಿ ಕೂಟವನ್ನು ಆಯೋಜಿಸುವುದೇ ಅನುಮಾನವಾಗಿದೆ.
 
ಒಂದು ವೇಳೆ ಒಲಿಂಪಿಕ್ಸ್ ರದ್ದಾದರೆ ಜಪಾನ್ ಗೆ ಲಕ್ಷಾಂತರ ಕೋಟಿ ರೂ. ನಷ್ಟವಾಗಲಿದೆ. ಇದೇ ಕಾರಣಕ್ಕೆ ಒಲಿಂಪಿಕ್ಸ್ ನ್ನು ಈ ವರ್ಷಾಂತ್ಯಕ್ಕೆ ಮುಂದೂಡಿಕೆ ಮಾಡಿ ನಷ್ಟವಾಗದಂತೆ ನೋಡಿಕೊಳ್ಳಲು ಜಪಾನ್ ಚಿಂತನೆ ನಡೆಸಿದೆ.
ಇದರಲ್ಲಿ ಇನ್ನಷ್ಟು ಓದಿ :