ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೆಲವೇ ದಿನ ಬಾಕಿಯಿರುವ ಬೆನ್ನಲ್ಲೇ ಒಲಿಂಪಿಕ್ಸ್ ಗ್ರಾಮದಲ್ಲಿ ಓರ್ವನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಖುದ್ದು ಸಂಘಟಕರೇ ಖಚಿತಪಡಿಸಿದ್ದಾರೆ. ಇದು ಕೂಟ ಆರಂಭಕ್ಕೂ ಮೊದಲು ಒಲಿಂಪಿಕ್ ಗ್ರಾಮದಲ್ಲಿ ಆತಂಕ ಸೃಷ್ಟಿಮಾಡಿದೆ.2020 ರಲ್ಲೇ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾ ಕೂಟ ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿ ಈ ವರ್ಷ ನಡೆಯುತ್ತಿದೆ. ಅದೂ ಕೊರೋನಾ ಕಾರಣದಿಂದ ಹಲವು ನಿಯಮಾವಳಿಗಳಲ್ಲಿ ಬದಲಾವಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೂಟ ಆಯೋಜಿಸಲಾಗುತ್ತಿದೆ. ಇದರ