ಸೆಮಿಫೈನಲ್ ನಲ್ಲಿ ಸೋತ ಕುಸ್ತಿಪಟು ದೀಪಕ್ ಪೂನಿಯಾಗೆ ಕಂಚಿಗೆ ಹೋರಾಟ

ಟೋಕಿಯೋ| Krishnaveni K| Last Modified ಬುಧವಾರ, 4 ಆಗಸ್ಟ್ 2021 (17:03 IST)
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟು ದೀಪಕ್ ಪೂನಿಯಾ ಸೆಮಿಫೈನಲ್ ನಲ್ಲಿ ಸೋತು ಕಂಚಿನ ಪದಕಕ್ಕೆ ಹೋರಾಟ ನಡೆಸಬೇಕಾಗಿದೆ.
 


86 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ದೀಪಕ್ ಅಮೆರಿಕಾದ ಡೇವಿಡ್ ಮಾರಿಸ್ ವಿರುದ್ಧ ಸೆಮಿಫೈನಲ್ ನಲ್ಲಿ ಸೋತಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ತೋರಿದ ಪ್ರದರ್ಶನ ಸೆಮಿಫೈನಲ್ ನಲ್ಲಿ ದೀಪಕ್ ರಿಂದ ಬರಲಿಲ್ಲ.
 
ಇದರಿಂದಾಗಿ ಟೇಲರ್ 10-0 ಅಂತರದಿಂದ ನೇರವಾಗಿ ಗೆಲುವು ಕಂಡಿದ್ದಾರೆ. ಇದೀಗ ದೀಪಕ್ ಗೆ ಪದಕದ ಆಸೆ ಜೀವಂತವಾಗಿದ್ದು, ಕಂಚಿನ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಗೆಲ್ಲಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :