ಸಾನಿಯಾ ಮಿರ್ಜಾ ಪುತ್ರನ ಫೋಟೋ ಲೀಕ್ ಆಯಿತೇ? ಪತಿ ಶೊಯೇಬ್ ತೋಳಲ್ಲಿ ಇದ್ದವರು ಯಾರು ಗೊತ್ತೇ?!

ಹೈದರಾಬಾದ್, ಗುರುವಾರ, 1 ನವೆಂಬರ್ 2018 (08:56 IST)

ಹೈದರಾಬಾದ್: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೊನ್ನೆಯಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಆದರೆ ಅವರ ಮಗುವಿನ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆಯೇ?
 
ಅಂತಹದ್ದೊಂದು ಫನ್ನಿ ಟ್ವೀಟ್ ಈಗ ಓಡಾಡುತ್ತಿದ್ದು, ನಗು ತಡೆಯಲಾಗದೆ ಸ್ವತಃ ಶೊಯೇಬ್ ಮಲಿಕ್ ಪ್ರತಿಕ್ರಿಯೆ ಜತೆಗೆ ಸ್ಪಷ್ಟನೆಯನ್ನೂ ನೀಡಬೇಕಾಗಿ ಬಂದಿದೆ.
 
ಅಸಲಿಗೆ ಶೊಯೇಬ್ ತಮ್ಮ ಸಹ ಕ್ರಿಕೆಟಿಗ ಬಾಬರ್ ಅಜಮ್ ರನ್ನು ತೋಳಲ್ಲಿ ಎತ್ತಿಕೊಂಡು ಹೋಗುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ಪ್ರಕಟಿಸಿದ್ದು, ‘ಬೇಬಿ ಮಿರ್ಜಾ ಮಲಿಕ್  ಲೀಕ್ಡ್ ಫೋಟೋ’ ಎಂದು ಬರೆದು ತಮಾಷೆ ಮಾಡಿದ್ದರು. ಇದನ್ನು ನೋಡಿ ಎಲ್ಲರೂ ಸಾನಿಯಾ ಮಗುವಿನ ಫೋಟೋಗಾಗಿ ಸರ್ಚ್ ಮಾಡಿದ್ದೇ ಮಾಡಿದ್ದು. ಆದರೆ ಇದು ತಮಾಷೆ ಎಂದು ಗೊತ್ತಾಗುತ್ತಿದ್ದಂತೆ ಪೆಚ್ಚಾಗುತ್ತಿದ್ದಾರೆ.
 
ಇದರ ಬಗ್ಗೆ ಶೊಯೇಬ್ ಮಲಿಕ್ ಪ್ರತಿಕ್ರಿಯೆ ನೀಡಿದ್ದು ‘ನಿಜವಾಗಿಯೂ ಇದು ತಮಾಷೆ. ಎಲ್ಲರಿಗೂ ಗೊತ್ತಿರಲಿ ಎಂದು ಹೇಳುತ್ತಿದ್ದೇನೆ, ನಾವು ನಮ್ಮ ಮಗನ ಯಾವುದೇ ಫೋಟೋವನ್ನು ಇದುವರೆಗೆ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿಲ್ಲ. ಇಲ್ಲಿರುವ ಈ ಮುದ್ದು ಮಗುವಿನ ಫೋಟೋ ನಮ್ಮದಲ್ಲ’ ಎಂದು ನಕ್ಕು ಪ್ರತಿಕ್ರಿಯೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮೀ ಟೂ ವಿವಾದದ ಬಗ್ಗೆ ಸೌರವ್ ಗಂಗೂಲಿ ಬಿಸಿಸಿಐಗೆ ರವಾನಿಸಿರುವ ಈಮೇಲ್ ನಲ್ಲಿ ಏನಿದೆ ಗೊತ್ತಾ?!

ಕೋಲ್ಕೊತ್ತಾ: ಬೆಂಗಾಳ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರೂ ಆಗಿರುವ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ...

news

ಸಾನಿಯಾ ಮಿರ್ಜಾ ಮಗುವಿನ ಹೆಸರಿನ ಹಿಂದಿದೆ ಜಾಣ್ಮೆಯ ಲೆಕ್ಕಾಚಾರ!

ಹೈದರಾಬಾದ್: ನಿನ್ನೆಯಷ್ಟೇ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಟೆನಿಸ್ ...

news

ನಾನು ಕ್ಯಾಚಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರೆ ಕೊಹ್ಲಿ ನಗುತ್ತಿದ್ದರು ಎಂದ ರೋಹಿತ್ ಶರ್ಮಾ

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಬ್ಯಾಟ್ ಜತೆಗೆ ಫೀಲ್ಡಿಂಗ್ ನಲ್ಲೂ ಕಮಾಲ್ ...

news

ಮತ್ತೆ ಮೈದಾನಕ್ಕಿಳಿದು ಭಾವುಕರಾದ ಸಚಿನ್ ತೆಂಡುಲ್ಕರ್

ಮುಂಬೈ: ಸಚಿನ್ ತೆಂಡುಲ್ಕರ್ ಎಂಬ ದಿಗ್ಗಜ ಕ್ರಿಕೆಟಿಗ ಬದುಕಿದ್ದೇ ಕ್ರಿಕೆಟ್ ಗಾಗಿ, ತನ್ನ ಉಸಿರೇ ಕ್ರಿಕೆಟ್ ...