ಕಾರು ಮಾರಲು ಹೊರಟ ಅಥ್ಲೆಟ್ ದ್ಯುತಿ ಚಾಂದ್: ಇದೆಲ್ಲಾ ನಾಟಕ ಎಂದ ಒಡಿಶಾ ಸರ್ಕಾರ

Dutee Chand
ನವದೆಹಲಿ| Krishnaveni K| Last Modified ಶುಕ್ರವಾರ, 17 ಜುಲೈ 2020 (10:15 IST)
ನವದೆಹಲಿ: ಭಾರತದ ಖ್ಯಾತ ಅಥ್ಲೆಟ್ ತಮಗೆ ಉಡುಗೊರೆಯಾಗಿ ಸಿಕ್ಕಿದ್ದ ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ನಿಭಾಯಿಸಲು ಹಣಕಾಸಿನ ಅಡಚಣೆಯಾಗಿದೆ. ಹೀಗಾಗಿ ಕಾರು ಮಾರಿ ಆರ್ಥಿಕ ಪರಿಸ್ಥಿತಿ ಸರಿಪಡಿಸಬೇಕಾಗಿದೆ ಎಂದು ಹೇಳಿಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

 
ದ್ಯುತಿ ಪರಿಸ್ಥಿತಿ ಅಷ್ಟು ದಯನೀಯವಾಗಿಲ್ಲ. ಆಕೆ ನಾಟಕವಾಡುತ್ತಿದ್ದಾಳೆ. ಇದೊಂದು ಆಕೆಗೆ ಅಭ್ಯಾಸವಾಗಿಬಿಟ್ಟಿದೆ. ನಾವು ಈಗಾಗಲೇ ಆಕೆಗೆ 4.09 ಕೋಟಿ ರೂ. ಧನಸಹಾಯ ಮಾಡಿದ್ದೇವೆ ಎಂದು ದಾಖಲೆ ಸಮೇತ ತಿರುಗೇಟು ನೀಡಿದೆ.
 
ಬೇಕೆಂದೇ ತನ್ನದು ದೈನೇಸಿ ಸ್ಥಿತಿ ಎಂದು ತೋರಿಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವುದು ಆಕೆಗೆ ಅಭ್ಯಾಸವಾಗಿಬಿಟ್ಟಿದೆ. ಆಕೆ ಹೇಳಿಕೊಂಡಷ್ಟು ಆರ್ಥಿಕವಾಗಿ ಆಕೆಗೆ ಬಡತವನವಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಇದರಲ್ಲಿ ಇನ್ನಷ್ಟು ಓದಿ :