ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಮಹಿಳೆಯರ ಬಾಕ್ಸಿಂಗ್ ನಲ್ಲಿ ಭಾರತದ ಲೊವ್ಲಿನಾ ಬರ್ಗೊಹಿನ್ ಸೆಮಿಫೈನಲ್ ತಲುಪಿದ್ದಾರೆ.ಈ ಮೂಲಕ ಕನಿಷ್ಠ ಕಂಚಿನ ಪದಕ ಗ್ಯಾರಂಟಿಯಾಗಿದೆ. ಈ ಮೂಲಕ ವಿಜೇಂದರ್ ಸಿಂಗ್ ಹಾಗೂ ಮೇರಿ ಕೋಮ್ ಬಳಿಕ ಬಾಕ್ಸಿಂಗ್ ನಲ್ಲಿ ಒಲಿಂಪಿಕ್ ಪದಕ ಗೆಲ್ಲುವ ಮೂರನೇ ಭಾರತೀಯರೆನಿಸಿಕೊಳ್ಳಲಿದ್ದಾರೆ.ಒಂದು ವೇಳೆ ಸೆಮಿಫೈನಲ್ ನಲ್ಲಿ ಗೆದ್ದರೆ ಬೆಳ್ಳಿ ಪದಕ ಖಚಿತವಾಗಲಿದೆ. ಕ್ವಾರ್ಟರ್ ಫೈನಲ್ ನಲ್ಲಿ ಚೈನೀಸ್ ತೈಪೆಯ ಮಾಜಿ ವಿಶ್ವ ಚಾಂಪಿಯನ್