ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪಾಲಿಗೆ ಕುಸ್ತಿಪಟುಗಳು ಅದೃಷ್ಟಶಾಲಿಗಳಾಗಿ ಪರಿಣಮಿಸಿದ್ದಾರೆ. ನಿನ್ನೆ ಒಂದೇ ದಿನ ಭಾರತದ ಮೂವರು ಕುಸ್ತಿಪಟುಗಳು ಮೂರು ಚಿನ್ನ ಗೆದ್ದುಕೊಟ್ಟಿದ್ದಾರೆ.ಹಿರಿಯ ತಾರೆ ರವಿಕುಮಾರ್ ದಹಿಯಾ, ನವೀನ್, ವಿನೇಶ್ ಪೋಘಟ್ ತಮ್ಮ ತಮ್ಮ ವಿಭಾಗಗಳಲ್ಲಿ ಫೈನಲ್ ತಲುಪಿ ಗೆಲ್ಲುವ ಮೂಲಕ ಚಿನ್ನದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಭಾರತ ಒಟ್ಟಾರೆ 13 ಚಿನ್ನದ ಪದಕ ಗೆದ್ದಂತಾಗಿದೆ. ಕುಸ್ತಿಯಲ್ಲಿ ಭಾರತದ ಮಹಿಳಾ ತಾರೆ ಪೂಜಾ ಗೆಹ್ಲೋಟ್ ಕಂಚಿನ