ಟೋಕಿಯೋ: ಭಾರತದ ಪುರುಷರ ಆರ್ಚರಿ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದು, ಕೊರಿಯಾ ತಂಡದ ವಿರುದ್ಧ ಕೆಲವೇ ನಿಮಿಷಗಳಲ್ಲಿ ಸೆಣಸಾಡಲಿದೆ.ಇಂದು ಬೆಳಗ್ಗೆ ಕಝಕಿಸ್ತಾನ ತಂಡದ ವಿರುದ್ಧ ಪಂದ್ಯದಲ್ಲಿ ಭಾರತೀಯರು 6-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ಭಾರತ ತಂಡದಲ್ಲಿ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಆಡುತ್ತಿದ್ದಾರೆ.ಶ್ರೇಯಾಂಕ ಸುತ್ತಿನಲ್ಲಿ ಭಾರತೀಯರ ಪ್ರದರ್ಶನ ತಕ್ಕಮಟ್ಟಿಗಿತ್ತಷ್ಟೇ. ಆದರೆ ಇಂದಿನ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.