ಈ ಬಾರಿ ನಿರಾಸೆ ಮೂಡಿಸಿದ ಭಾರತೀಯ ಶೂಟರ್ ಗಳು

ಟೋಕಿಯೋ| Krishnaveni K| Last Modified ಮಂಗಳವಾರ, 27 ಜುಲೈ 2021 (09:11 IST)
ಟೋಕಿಯೋ: ಒಲಿಂಪಿಕ್ಸ್ ನಂತಹ ಮಹಾನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಅಚ್ಚರಿಯ ಫಲಿತಾಂಶ ನೀಡುವ ಶೂಟಿಂಗ್ ವಿಭಾಗ ಈ ಬಾರಿ ಕಳೆಗುಂದಿದೆ.

 
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಶೂಟರ್ ಗಳದ್ದು ನಿರಾಶಾದಾಯಕ ಪ್ರದರ್ಶನವಾಗಿದೆ.ಶೂಟಿಂಗ್ ನಲ್ಲಿ ಮಿಂಚಬೇಕಿದ್ದ ಯಶಸ್ವಿನಿ ಸಿಂಗ್ ದಸ್ವಾಲ್, ದೀಪಕ್ ಕುಮಾರ್, ದಿವ್ಯಾಂಶ್ ಪನ್ವಾರ್, ಮನು ಭಾಕರ್ ವಿಫಲತೆ ಅನುಭವಿಸಿದ್ದು ಭಾರತಕ್ಕೆ ನಿರಾಶೆಯಾಗಿದೆ.
 
ಅರ್ಹತಾ ಸುತ್ತಿನಲ್ಲೇ ಭಾರತೀಯರು ಹೊರಬಿದ್ದಿದ್ದಾರೆ. ಇದರಿಂದಾಗಿ ಈ ಬಾರಿ ಶೂಟಿಂಗ್ ನಲ್ಲಿ ಪದಕ ಗೆಲ್ಲುವ ಆಸೆ ಬತ್ತಿ ಹೋಗಿದೆ. ಇದೀಗ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಕ್ಸಿಂಗ್ ಮೇಲೆ ಎಲ್ಲರ ನಿರೀಕ್ಷೆಯಾಗಿದೆ. ಇದುವರೆಗೆ ಭಾರತ ಗೆದ್ದಿರುವುದು ಕೇವಲ ಒಂದೇ ಪದಕ. ಈ ಪದಕ ಬೇಟೆ ಹೆಚ್ಚಲಿ ಎಂಬುದೇ ಭಾರತೀಯ ಹಾರೈಕೆ.
ಇದರಲ್ಲಿ ಇನ್ನಷ್ಟು ಓದಿ :