ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ನಲ್ಲಿ ಸಾಧನೆ ಮಾಡಿದವರ ಪಟ್ಟಿಯಲ್ಲಿ ಕೇವಲ ಹೈದರಾಬಾದ್, ತೆಲುಗು ಮೂಲದವರು ಅಥವಾ ನಿರ್ದಿಷ್ಟ ಬ್ಯಾಡ್ಮಿಂಟನ್ ಅಕಾಡೆಮಿಯವರು ಮಾತ್ರ ಮುಂಚೂಣಿಗೆ ಬರುತ್ತಿರುವುದೇಕೆ ಎಂದು ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕಿಡಿ ಕಾರಿದ್ದಾರೆ. ಕೋಚ್ ಪುಲ್ಲೇಲ ಗೋಪಿಚಂದ್ ಮೇಲೆ ಈ ರೀತಿ ಅವರು ಆಕ್ರೋಶ ಹೊರಹಾಕಿದ್ದಾರೆ. ಗೋಪಿಚಂದ್ ಆಡುತ್ತಿದ್ದಾಗ ಬೇರೆ ರಾಜ್ಯದವರೂ ಭಾರತದ ಪರ ಆಡುತ್ತಿದ್ದರು. ಆದರೆ ಕಳೆದ 10-12 ವರ್ಷಗಳಲ್ಲಿ ಹೈದರಾಬಾದ್ ಅಥವಾ ತೆಲುಗು ಮೂಲದ ಆಟಗಾರರು