ಸೆಮಿಫೈನಲ್ ನಲ್ಲಿ ಸೋತ ಲೊವ್ಲಿನಾ ಕಂಚಿನ ಪದಕಕ್ಕೆ ತೃಪ್ತಿ

ಟೋಕಿಯೋ| Krishnaveni K| Last Modified ಬುಧವಾರ, 4 ಆಗಸ್ಟ್ 2021 (11:32 IST)
ಟೋಕಿಯೋ: ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಲೊವ್ಲಿನಾ ಬರ್ಗೊಹೆ ಸೆಮಿಫೈನಲ್ ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

 
ಇದೀಗ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಲೊವ್ಲಿನಾ ಟರ್ಕಿಯ ಸುರ್ಮೆನೆಲಿ ಬುಸೆನಾಝ್ ವಿರುದ್ಧ 0-5 ಅಂತರದಿಂದ ಸೋಲು ಅನುಭವಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಸುರ್ಮೆನೆಲಿ ಸಂಪೂರ್ಣವಾಗಿ ಲೊವ್ಲಿನಾ ವಿರುದ್ಧ ಮೇಲುಗೈ ಹೊಂದಿದ್ದರು.
 
ಈ ಪಂದ್ಯಕ್ಕೂ ಮೊದಲೇ ಲೊವ್ಲಿನಾಗೆ ಕನಿಷ್ಠ ಕಂಚಿನ ಪದಕ ಖಾತ್ರಿಯಾಗಿತ್ತು. ಹಾಗಿದ್ದರೂ ಇಂದು ಪದಕ ಗೆದ್ದು ಫೈನಲ್ ಗೇರಿದ್ದರೆ ಬೆಳ್ಳಿ ಅಥವಾ ಚಿನ್ನದ ಪದಕ ಗೆಲ್ಲುವ ಅವಕಾಶವಿತ್ತು.
ಇದರಲ್ಲಿ ಇನ್ನಷ್ಟು ಓದಿ :