ಗೆದ್ದು ಬಾ ಲೊವ್ಲಿನಾ! ಬಾಕ್ಸರ್ ತಾರೆಯ ಸೆಮಿಫೈನಲ್ ಪಂದ್ಯ ಇಂದು

ಟೋಕಿಯೋ| Krishnaveni K| Last Modified ಬುಧವಾರ, 4 ಆಗಸ್ಟ್ 2021 (09:01 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಮಹತ್ವದ ದಿನ. ಈಗಾಗಲೇ ಪದಕ ಖಾತ್ರಿ ಮಾಡಿಕೊಂಡಿರುವ ಬಾಕ್ಸಿಂಗ್ ತಾರೆ ಲೊವ್ಲಿನಾ ಬರ್ಗೊಹೆ ಇಂದು ಸೆಮಿಫೈನಲ್ ಪಂದ್ಯವಾಡಲಿದ್ದಾರೆ.

 
ಇಂದು ಪಂದ್ಯ ಗೆದ್ದರೆ ಆಕೆ ಫೈನಲ್ ಗೆ ಅರ್ಹತೆ ಪಡೆಯುವುದರ ಜೊತೆಗೆ ಚಿನ್ನದ ಪದಕ ಗೆಲ್ಲುವ ಅವಕಾಶ ಪಡೆಯಲಿದ್ದಾರೆ. ಒಂದು ವೇಳೆ ಸೋತರೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.
 
ಇಂದು ಟರ್ಕಿ ದೇಶದ ಬುಸೆನಾಝ್ ಸರ್ಮೆನಲಿ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಈ ಕಾಳಗ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಇದರಲ್ಲಿ ಇನ್ನಷ್ಟು ಓದಿ :